
ಪ್ರಜಾವಾಣಿ ವಾರ್ತೆ
ಎ.ಎಚ್. ವಿಶ್ವನಾಥ್
ಮೈಸೂರು: ‘ಅಧಿಕಾರ ಹಂಚಿಕೆ ಆಗಲೇಬೇಕು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲೇಬೇಕು’ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎ.ಎಚ್. ವಿಶ್ವನಾಥ್ ಹೇಳಿದರು.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಲು ಹಾಗೂ ಕಳೆದ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲು ಶಿವಕುಮಾರ್ ದೊಡ್ಡ ಕೊಡುಗೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದಾರೆ’ ಎಂದರು.
‘ಮಾಜಿ ಸಂಸದ ಪ್ರತಾಪ ಸಿಂಹ–ಶಾಸಕ ಪ್ರದೀಪ್ ಈಶ್ವರ್ ನಡುವಿನ ಹೇಳಿಕೆಗಳ ಜಟಾಪಟಿ ಅಸಹ್ಯ ಮೂಡಿಸುವಂತಿದೆ. ತಾಯಿ ಕುರಿತೆಲ್ಲಾ ಮಾತನಾಡುತ್ತಾರೆ ಎಂದರೆ ಏನರ್ಥ? ಇಂತಹ ಅನಾಗರಿಕ ಹೇಳಿಕೆಗಳು ಹಾಗೂ ಕೀಳುಮಟ್ಟದ ರಾಜಕಾರಣ ಸರಿಯಲ್ಲ. ಅವರಿಬ್ಬರನ್ನೂ ಒದ್ದು ಒಳಗೆ ಹಾಕಬೇಕು’ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ರಘು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.