ADVERTISEMENT

‘ಕಡೇ ಎಚ್ಚರಿಕೆ... ಬಿಜೆಪಿಗೆ ಬನ್ನಿ’ ಎಂಬ ಆಹ್ವಾನ ತಿರಸ್ಕರಿಸಿದ್ದರ ಪರಿಣಾಮವಿದು

ಸಂಸದ ಡಿ.ಕೆ ಸುರೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 17:37 IST
Last Updated 28 ಸೆಪ್ಟೆಂಬರ್ 2019, 17:37 IST
   

ರಾಮನಗರ: ‘ಇದು ನಿಮಗೆ ಕಡೆ ಎಚ್ಚರಿಕೆ. ಬಿಜೆಪಿಗೆ ಬನ್ನಿ,’ಎಂದು ನೀಡಿದ್ದ ಆಹ್ವಾನವನ್ನು ನಿರಾಕರಿಸಿದ ಪರಿಣಮ ಇಂದು ಜೈಲಿನಲ್ಲಿರಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಕನಕಪುರದಲ್ಲಿ ಶನಿವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಇಂದುಇ.ಡಿ, ಐ.ಟಿ, ಸಿಬಿಐ ಸೇರಿದಂತೆ ದೇಶದ ಇಡೀ ಆಡಳಿತವೇ ಬಿಜೆಪಿಯ ಕಪಿಮುಷ್ಠಿಯಲ್ಲಿವೆ. ಕೋರ್ಟ್ ಮೇಲೆ ಮಾತ್ರ ನಮಗೆ ವಿಶ್ವಾಸ ಇದೆ. ಹೀಗಾಗಿ ಜಾಮಿನು ಸಿಗುವ ನಿರೀಕ್ಷೆ ಇದೆ. ಇದನ್ನು ಬಿಟ್ಟರೆ, ಇನ್ನುಳಿದ ಎಲ್ಲ ಸಂಸ್ಥೆ, ಆಡಳಿತಗಳು ಬಿಜೆಪಿ ಪಾಲಾಗಿವೆ,’ಎಂದರು.

‘ಇದು ನಿಮಗೆ ಕಡೆ ಎಚ್ಚರಿಕೆ. ಬಿಜೆಪಿಗೆ ಬನ್ನಿ,’ಎಂದು ನೀಡಿದ್ದ ಆಹ್ವಾನವನ್ನು ನಿರಾಕರಿಸಿದ ಪರಿಣಮ ಇಂದು ಜೈಲಿನಲ್ಲಿರಬೇಕಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ನಮ್ಮ‌‌ ಮೇಲೆ ಊಹಾಪೋಹದ ಸುದ್ದಿ‌ ಪ್ರಕಟಿಸಿವೆ. ಎಲ್ಲ ಟಿ.ವಿಗಳ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು,’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.