ADVERTISEMENT

ನಾಡಿನಲ್ಲಿ ಕನ್ನಡಕ್ಕೇ ಮೊದಲ ಮಣೆ: ದೊಡ್ಡರಂಗೇಗೌಡ ಸ್ಪಷ್ಟನೆ

86ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 6:56 IST
Last Updated 24 ಜನವರಿ 2021, 6:56 IST
ದೊಡ್ಡರಂಗೇಗೌಡ
ದೊಡ್ಡರಂಗೇಗೌಡ   

ಬೆಂಗಳೂರು: ‘ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೇ ಮೊದಲ ಮಣೆ ಹಾಕಬೇಕು’ ಎಂದು ದೊಡ್ಡರಂಗೇಗೌಡ ತಿಳಿಸಿದ್ದಾರೆ.

ತಮ್ಮ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಕಾರಣ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ಇಲ್ಲಿ ಕನ್ನಡವನ್ನು ಬಳಸುವುದು ಮತ್ತು ಬೆಳೆಸುವುದು ನಮ್ಮ ಆದ್ಯಕರ್ತವ್ಯ. ನಮ್ಮ ಭಾಷೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಹಿಂದಿಯನ್ನು ಭಾಷೆಯಾಗಿ ಕಲಿಯುವುದರಲ್ಲಿ ಅಭ್ಯಂತರವಿಲ್ಲ. ಪರಕೀಯರ ಭಾಷೆಯಾದ ಇಂಗ್ಲಿಷಿಗೆ ನೀಡುವ ಪ್ರಾಧಾನ್ಯತೆಯ ಹತ್ತನೆ ಒಂದರಷ್ಟು ಭಾಗವನ್ನು ಭಾರತೀಯ ಭಾಷೆಗೆ ನೀಡಿದರೆ ಇಲ್ಲಿನ ಎಷ್ಟೋ ಭಾಷೆಗಳು ಬೆಳೆದಿರುತ್ತಿದ್ದವು’ ಎಂದು ಅಭಿಪ್ರಾಯ ಪಟ್ಟರು.

‘ಕನ್ನಡಕ್ಕಿಂತ ಹೆಚ್ಚಿನ ಪ್ರಾತಿನಿಧ್ಯವನ್ನು ಇಂಗ್ಲಿಷಿಗೆ ನೀಡಲಾಗುತ್ತಿದೆ. ಗುಲಾಮಗಿರಿಯ ಆ ಭಾಷೆಗೆ ಇನ್ನೂ ಮಣೆ ಹಾಕುತ್ತಿರುವುದು ದುರ್ದೈವ. ಇಂಗ್ಲಿಷಿಗೆ ನೀಡಿದ ಆದ್ಯತೆಯನ್ನು ಈ ದೇಶದ ಭಾಷೆಯಾದ ಹಿಂದಿಗೆ ನೀಡಿದರೆ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಆಶಯ. ಹಾಗಂತ ನಾನು ಹಿಂದಿ ಭಾಷೆಯ ವಕ್ತಾರನಲ್ಲ. ಯಾವತ್ತಿಗೂ ಈ ನಾಡಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡಕ್ಕೆ ಮೊದಲ ಸ್ಥಾನಮಾನ ದೊರೆಯಬೇಕು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.