ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್
ಬೆಂಗಳೂರು: ದುಪ್ಪಟ್ಟು ಕಮಿಷನ್‌ಗೆ ಕಾರಣವಾದ ಆ ಫಾರ್ಮುಲಾ ಯಾವುದು ಸಿದ್ದರಾಮಯ್ಯನವರೇ? ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಗುತ್ತಿಗೆಯಲ್ಲಿ ಕಮಿಷನ್ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘ ಸಿಎಂಗೆ ಪತ್ರ ಬರೆದಿರುವ ಸುದ್ದಿ ತುಣಕು ಹಂಚಿಕೊಂಡು ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಇರುವ ಎಲ್ಲ ಸರ್ಕಾರಕ್ಕಿಂತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದುಪ್ಪಟ್ಟು ಕಮಿಷನ್ ಪಡೆಯುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಖುದ್ದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ. ಜೇಷ್ಠತೆ ಮತ್ತು ಪಾರದರ್ಶಕತೆಯನ್ನು ಮೀರಿ ಸ್ಪೆಷಲ್ ಫಾರ್ಮುಲಾ ಮೂಲಕ ಶೇ.15-20 ರಷ್ಟು ಎಲ್ ಓಸಿ ಬಿಡುಗಡೆಯಾಗುತ್ತಿದೆ ಎಂದು ಸಂಘ ಆರೋಪಿಸಿದೆ. ಹಾಗಾದರೆ ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಆಪ್ತ ಸಚಿವರ ಖಾತೆಯಲ್ಲೇ ಈ ರೀತಿ ವ್ಯವಸ್ಥೆ ಇದೆ ಎಂದು ಸಂಘ ಆರೋಪಿಸಿದೆ. ಹಾಗಾದರೆ ಈ ಸ್ಪೆಷಲ್ ಫಾರ್ಮುಲಾ ವ್ಯವಸ್ಥೆ ಇರುವುದು ನಿಮ್ಮ ಗಮನಕ್ಕೂ ಇದೆ ಎಂದೇ ಅರ್ಥವಲ್ಲವೇ ? ಗೊತ್ತಿದ್ದು ಸುಮ್ಮನಿರುವುದು ಎಂದರೆ ಅರ್ಥವೇನು ಸ್ವಾಮಿ? ಎಂದು ಪ್ರಶ್ನಿಸಿದ್ದಾರೆ.
ಮಠದೊಳಗಿನ ಬೆಕ್ಕು ಇಲಿಯ ಕಂಡೊಡನೆ ಪುಟ ನೆಗೆದಂತೆ ಕಾಣ ಎಂಬಂತಾಗಿದೆಯೇ ನಿಮ್ಮ ಸ್ಥಿತಿ ? ನಿಮ್ಮದೀಗ 50- 50 ಅವಧಿಯ ಶೇ 80 ಕಮಿಷನ್ ಸರ್ಕಾರ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.