ADVERTISEMENT

ಬಿಎಸ್‌ವೈ ನಾಯಕತ್ವ ಕೊನೆಯಾಗುವ ಲಕ್ಷಣ ಗೋಚರ: ಲಿಂಗಾಯತ-ವೀರಶೈವ ಸಮನ್ವಯ ವೇದಿಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 20:02 IST
Last Updated 1 ನವೆಂಬರ್ 2020, 20:02 IST
   

ಬೆಂಗಳೂರು: ‘ಒಂದು ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಆ ಸ್ಥಾನಕ್ಕೆ ಸಮುದಾಯದ ಮತ್ತೊಬ್ಬ ಗಟ್ಟಿ ನಾಯಕರನ್ನೇ ಬಿಜೆಪಿ ಹೈಕಮಾಂಡ್ ಪರಿಗಣಿಸಬೇಕು’ ಎಂದು ಲಿಂಗಾಯತ-ವೀರಶೈವ ಸಮನ್ವಯ ವೇದಿಕೆ ಒತ್ತಾಯಿಸಿದೆ.

ನಗರದಲ್ಲಿ ಭಾನುವಾರ ವೇದಿಕೆಯು ಏರ್ಪಡಿಸಿದ್ದ ಸಂವಾದ ಸಭೆಯಲ್ಲಿ ಲಿಂಗಾಯತ-ವೀರಶೈವ ಸಮುದಾಯದ ಮುಖಂಡರು ಪ್ರಸ್ತುತ ರಾಜಕೀಯ ಸ್ಥಿತಿಗತಿಯ ಬಗ್ಗೆ ಚರ್ಚಿಸಿದರು.

‘ಜೆಡಿಎಸ್ ದ್ರೋಹದ ಕಾರಣ ಅನುಕಂಪದ ಆಧಾರದಲ್ಲಿ ಯಡಿಯೂರಪ್ಪ ಅವರನ್ನು ಸಮುದಾಯವು ನಾಯಕ ಎಂದು ಒಪ್ಪಿಕೊಂಡಿತು. ಆದರೆ, ಈಗ ಅವರ ನಾಯಕತ್ವ ಕೊನೆಯಾಗುವ ಲಕ್ಷಣಗಳು ಕಾಣುತ್ತಿವೆ. ಹಾಗಾಗಿ ಬಿಜೆಪಿಯು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಸಮುದಾಯದ ಬಸನಗೌಡ ಪಾಟೀಲ ಯತ್ನಾಳ, ಜಗದೀಶ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನೇ ಪರಿಗಣಿಸಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

‘ಕಾಂಗ್ರೆಸ್‌ನಲ್ಲಿ ಎಂ.ಬಿ. ಪಾಟೀಲ ಅವರು ನಿರ್ವಿವಾದವಾಗಿ ಸಮುದಾಯದ ನಾಯಕ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಸಮುದಾಯವನ್ನು ಒಡೆದು, ಎಂ‌.ಬಿ ಪಾಟೀಲ ಅವರನ್ನು ಹರಕೆಯ ಕುರಿ ಮಾಡಿದರು’ ಎಂದು ಮುಖಂಡರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.