ADVERTISEMENT

13 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 2:43 IST
Last Updated 13 ಫೆಬ್ರುವರಿ 2026, 2:43 IST
   

ಬಾಂಗ್ಲಾದಲ್ಲಿ ಹೊಸ ಸರ್ಕಾರ ರಚನೆ, ಟಿ20 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ಭಾರತದ ಗೆಲುವು ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಬಾಂಗ್ಲಾದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ; ಸ್ಪಷ್ಟ ಬಹುಮತ ಸಾಧಿಸಿದ ಬಿಎನ್‌ಪಿ

ಢಾಕಾ: 2024ರ ಆಗಸ್ಟ್‌ನಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಪತನಗೊಂಡ ಬಳಿಕ ಅಧಿಕಾರ ವಹಿಸಿಕೊಂಡಿದ್ದ ಮಧ್ಯಂತರ ಸರ್ಕಾರವನ್ನು ಬದಲಿಸಲು ನಡೆದ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಗೆಲುವಿನತ್ತ ಸಾಗಿದೆ.

Karnataka Budget: ಮಾರ್ಚ್ 6ರಂದು ರಾಜ್ಯ ಬಜೆಟ್‌ ಮಂಡನೆ

ಬೆಂಗಳೂರು: ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್‌ ಅನ್ನು ಮಾರ್ಚ್‌ 6 ರಂದು ಮಂಡಿಸಲಿದ್ದಾರೆ.

ADVERTISEMENT

ಮೆಟ್ರೊ ಕೆಂಪು ಮಾರ್ಗದ ಡಬಲ್ ಡೆಕರ್‌ಗೆ ಕೇಂದ್ರ ಆಕ್ಷೇಪ: ಮರುಪರಿಶೀಲನೆಗೆ ಸೂಚನೆ

ಬೆಂಗಳೂರು: ನಮ್ಮ ಮೆಟ್ರೊ ಹೆಬ್ಬಾಳ– ಸರ್ಜಾಪುರ ಡಬಲ್‌ ಡೆಕರ್‌ ಕಾರಿಡಾರ್‌ ಯೋಜನೆಗೆ ಅನುಮೋದನೆ ನೀಡಲು ಕೇಂದ್ರ ಸರ್ಕಾರ ಮತ್ತೆ ನಿರಾಕರಿಸಿದ್ದು, ಈ ಯೋಜನೆ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದೆ. 

ನಾಯಕತ್ವ ವಿಚಾರ: ಡಿ.ಕೆ. ಶಿವಕುಮಾರ್‌ಗೆ ರಾಹುಲ್‌ ಗಾಂಧಿ ಅಭಯ

ನವದೆಹಲಿ: ‘ಅಧಿಕಾರ ಹಂಚಿಕೆ ಸೂತ್ರ’ದಂತೆ ಕರ್ನಾಟಕ ಸರ್ಕಾರದ ನಾಯಕತ್ವಕ್ಕಾಗಿ ತಾಳ್ಮೆಯಿಂದ ಕಾಯುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನ ವರಿಷ್ಠ ನಾಯಕ ರಾಹುಲ್‌ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಗುರುವಾರ ಇಲ್ಲಿ ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸಿದರು. 

IPL 2026: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಕ್ಕೆ ಅನುಮತಿ

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರವು, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಷರತ್ತುಬದ್ಧ ಅನುಮತಿ ನೀಡಿದೆ.

T20 World Cup: ಇಶಾನ್, ಹಾರ್ದಿಕ್ ಅರ್ಧಶತಕ; ಭಾರತಕ್ಕೆ ಎರಡನೇ ಜಯ

ನವದೆಹಲಿ: ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಆಟದ ಬಲದಿಂದ ಹಾಲಿ ಚಾಂಪಿಯನ್ ಭಾರತ ತಂಡವು ಗುರುವಾರ ನಮೀಬಿಯಾ ಎದುರಿನ ಪಂದ್ಯದಲ್ಲಿ ಸುಲಭ ಜಯ ಸಾಧಿಸಿತು. 

ಡೊನಾಲ್ಡ್ ಟ್ರಂಪ್‌ ‘ಶಾಂತಿ ಮಂಡಳಿ’ ಸೇರಿದ ಇಸ್ರೇಲ್‌

ವಾಷಿಂಗ್ಟನ್‌: ಗಾಜಾ ಆಡಳಿತದ ಮೇಲ್ವಿಚಾರಣೆ ನಡೆಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಸ್ಥಾಪಿಸಿರುವ ‘ಶಾಂತಿ ಮಂಡಳಿ’ಗೆ ಇಸ್ರೇಲ್ ಸೇರ್ಪಡೆಗೊಂಡಿದೆ ಎಂದು ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಹೇಳಿದರು.

ಅರಾವಳಿಯನ್ನು ಮಟ್ಟಲು ಯಾರಿಗೂ ಅವಕಾಶ ಕೊಡುವುದಿಲ್ಲ: ಸುಪ್ರೀಂ ಕೋರ್ಟ್‌

ನವದೆಹಲಿ: ‘ಅರಾವಳಿಯನ್ನು ಮಟ್ಟಲು ಯಾರಿಗೂ ಅವಕಾಶ ಕೊಡುವುದಿಲ್ಲ. ವೈಜ್ಞಾನಿಕವಾದ ತಳಮಟ್ಟದ ವರದಿ ಆಧರಿಸಿ ಮಾತ್ರ ತಜ್ಞರ ಸಮಿತಿಯು ಯೋಜನೆಗಳನ್ನು ಪರಿಗಣಿಸಬಹುದು’ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಲೋಕಾಯುಕ್ತ ದಾಳಿ: ಕ್ರೈಸ್‌ ಎಸ್‌ಇ ಜನಾರ್ಧನ್‌ ಮನೆಯಲ್ಲಿ ₹1.70 ಕೋಟಿ ನಗದು ಪತ್ತೆ

ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳ ನಾಲ್ವರು ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಸೂಪರಿಂಟೆಂಡ್‌ ಎಂಜಿನಿಯರ್‌ ಎಚ್‌.ಎಂ.ಜನಾರ್ದನ ಅವರ ಆಪ್ತರ ಮನೆಯಲ್ಲಿ ₹1.70 ಕೋಟಿ ನಗದು ಸೇರಿ ಒಟ್ಟು ₹19.71 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ಚಿತ್ರರಂಗಕ್ಕೆ ಕಾಲಿಟ್ಟ ನಟ ಉಪೇಂದ್ರ ಪುತ್ರ ಆಯುಷ್

ನಟ ಉಪೇಂದ್ರ ಪುತ್ರ ಆಯುಷ್ ಉಪೇಂದ್ರ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಕಾಶ್ಮೀರದಲ್ಲಿ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಇಬ್ಬರೂ ಮಗನ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.