ADVERTISEMENT

ಅಶ್ಲೀಲವಾಗಿ ನಿಂದಿಸಿದ್ದ ಪ್ರಕರಣ: ಪುನೀತ್‌ ಕೆರೆಹಳ್ಳಿ ಸೇರಿ ಮೂವರ ವಿರುದ್ಧ FIR

ನ್ಯಾಯಾಲಯದ ಸೂಚನೆ ಮೇರೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 15:49 IST
Last Updated 3 ಫೆಬ್ರುವರಿ 2026, 15:49 IST
ಪುನೀತ್‌ ಕೆರೆಹಳ್ಳಿ
ಪುನೀತ್‌ ಕೆರೆಹಳ್ಳಿ   

ಬೆಂಗಳೂರು: ಹೋರಾಟಗಾರ ಬೈರಪ್ಪ ಹರೀಶ್‌ಕುಮಾರ್ ಅವರನ್ನು ನಿಂದಿಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಅಡಿ ಮೂವರ ವಿರುದ್ಧ ಎಸ್‌.ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರದ ನಿವಾಸಿ, ಹೋರಾಟಗಾರ ವಸಂತ್‌ ಗಿಳಿಯಾರ್, ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್‌ ಕೆರೆಹಳ್ಳಿ ಹಾಗೂ ಪತ್ರಕರ್ತ ‘ಕಿರಿಕ್‌’ ಕೀರ್ತಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

48ನೇ ಎಸಿಜೆಎಂ ನ್ಯಾಯಾಲಯದ ಸೂಚನೆ ಮೇರೆಗೆ ಎಸ್‌.ಜೆ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಸೆಪ್ಟೆಂಬರ್ 9ರಂದು ಕನ್ನಡ ಸುದ್ದಿ ವಾಹಿನಿಯೊಂದರಲ್ಲಿ ನಡೆದಿದ್ದ ಚರ್ಚಾ ಕಾರ್ಯಕ್ರಮಕ್ಕೆ ತನ್ನನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅಂದು ಮಧ್ಯಾಹ್ನ 12.45ರ ಸುಮಾರಿಗೆ ಕಾರ್ಯಕ್ರಮ ಆರಂಭವಾಗಿತ್ತು. ಅದರಲ್ಲಿ ವಸಂತ್ ಗಿಳಿಯಾರ್ ಸಹ ಪಾಲ್ಗೊಂಡಿದ್ದರು. ಚರ್ಚೆಯ ವೇಳೆ ಅಭಿಪ್ರಾಯ ಭಿನ್ನತೆಯಿಂದ ವಾಗ್ವಾದ ಉಂಟಾಗಿತ್ತು. ಕಾರ್ಯಕ್ರಮ ಮುಕ್ತಾಯವಾದ ಮೇಲೆ ಎಲ್ಲವನ್ನೂ ಮರೆತು ಮನೆಯತ್ತ ಹೊರಟಿದ್ದೆ. ಸುದ್ದಿ ವಾಹಿನಿ ಕಚೇರಿ ಎದುರಿಗೆ ಪುನೀತ್‌ ಕೆರೆಹಳ್ಳಿ ಅವರನ್ನು ಕರೆಸಿಕೊಂಡು ಅಶ್ಲೀಲವಾಗಿ ನಿಂದಿಸಿ, ಬೆದರಿಕೆ ಒಡ್ಡಲಾಗಿತ್ತು. ಅಲ್ಲದೇ ಹಲ್ಲೆಗೆ ಯತ್ನಿಸಲಾಗಿತ್ತು’ ಎಂದು ಬೈರಪ್ಪ ಹರೀಶ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.