ADVERTISEMENT

ಪ್ರವಾಹ ಯಥಾಸ್ಥಿತಿ: ಸಂಚಾರಕ್ಕೆ ಮುಕ್ತವಾಗದ ಹೆದ್ದಾರಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 12:41 IST
Last Updated 9 ಸೆಪ್ಟೆಂಬರ್ 2019, 12:41 IST
ಗದಗ ಜಿಲ್ಲೆಯ ಹೊಳೆ ಆಲೂರು ಸಮೀಪದ ಗಾಡಗೋಳಿ ಗ್ರಾಮದ ಹೊಲಗಳಲ್ಲಿ ಆವರಿಸಿರುವ ಮಲಪ್ರಭಾ ಪ್ರವಾಹ
ಗದಗ ಜಿಲ್ಲೆಯ ಹೊಳೆ ಆಲೂರು ಸಮೀಪದ ಗಾಡಗೋಳಿ ಗ್ರಾಮದ ಹೊಲಗಳಲ್ಲಿ ಆವರಿಸಿರುವ ಮಲಪ್ರಭಾ ಪ್ರವಾಹ   

ಗದಗ: ಜಿಲ್ಲೆಯ ನರಗುಂದ ಮತ್ತು ರೋಣ ತಾಲ್ಲೂಕಿನಲ್ಲಿ ಸೋಮವಾರ ಮಲಪ್ರಭಾ ನದಿ ತೀರದಲ್ಲಿ ಪ್ರವಾಹ ಯಥಾಸ್ಥಿತಿಯಲ್ಲಿತ್ತು.

ನವಿಲುತೀರ್ಥ ಜಲಾಶಯದಿಂದ ನದಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣ 21 ಸಾವಿರದಿಂದ 8 ಸಾವಿರ ಕ್ಯುಸೆಕ್‌ಗೆ ತಗ್ಗಿದೆಯಾದರೂ ನೆರೆಯಿಂದ ನಡುಗಡೆಯಾಗಿರುವ ಕುರುವಿನಕೊಪ್ಪ ಮತ್ತು ಲಕಮಾಪುರ, ಬೂದಿಹಾಳ ಗ್ರಾಮಗಳಲ್ಲಿ ಮಾತ್ರ ನೀರು ಇನ್ನೂ ತಗ್ಗಿಲ್ಲ.

ಕೊಣ್ಣೂರು ಬಳಿ ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ಹಾಗೂ ಹೊಳೆಆಲೂರು–ಬಾದಾಮಿ ಸಂಪರ್ಕಿಸುವ ಸೇತುವೆ ಮೇಲೆ ನದಿ ನೀರು ಇನ್ನೂ ಹರಿಯುತ್ತಿರುವುದರಿಂದ ಮೂರನೇ ದಿನವೂ ವಾಹನ ಸಂಚಾರ ಬಂದ್‌ ಆಗಿತ್ತು.

ADVERTISEMENT

ಜಲಾಶಯದಿಂದ ನದಿಗೆ ಬಿಡಲಾಗುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಮಂಗಳವಾರ ಸಂಜೆ ಒಳಗೆ ಪ್ರವಾಹ ಇಳಿದು, ಯಥಾಸ್ಥಿತಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.