ಈಶ್ವರ ಖಂಡ್ರೆ
– ಪ್ರಜಾವಾಣಿ ಚಿತ್ರ
ಸುವರ್ಣ ವಿಧಾನಸೌಧ (ಬೆಳಗಾವಿ): ‘ಅರಣ್ಯ ಪ್ರದೇಶ ಒತ್ತುವರಿ ಒಂದು ದೊಡ್ಡ ಸಮಸ್ಯೆ. ಆ ಒತ್ತುವರಿಗಳನ್ನು ತೆರವು ಮಾಡಿಸಲು ಆದ್ಯತೆ ನೀಡಿ’ ಎಂದು ನೂತನವಾಗಿ ನೇಮಕಗೊಂಡ 21 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಎಸಿಎಫ್) ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಕಿವಿಮಾತು ಹೇಳಿದರು.
ನೂತನವಾಗಿ ನೇಮಕಗೊಂಡು ತರಬೇತಿ ಪೂರೈಸಿ, ಸೇವೆಗೆ ಲಭ್ಯವಾದ 21 ಎಸಿಎಫ್‌ಗಳಿಗೆ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ನಿಷ್ಠೆ ಮತ್ತು ದಕ್ಷತೆಯ ಪ್ರಮಾಣವಚನ ಬೋಧಿಸಿ ಅವರು ಮಾತನಾಡಿದರು.
‘ಎಲ್ಲ ಪದವೀಧರರಿಗೂ ಸರ್ಕಾರಿ ನೌಕರಿಯ ಅವಕಾಶ ಸಿಗುವುದಿಲ್ಲ. ನಿಮಗೆ ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು, ಅರಣ್ಯ ಸಂರಕ್ಷಣೆಗೆ ಶ್ರಮಿಸಿ. ಇದು ಅತ್ಯಂತ ಮಹತ್ವದ ಇಲಾಖೆಯಾಗಿದ್ದು, ಪ್ರಕೃತಿ, ಪರಿಸರ, ಪಕ್ಷಿ-ಪ್ರಾಣಿ-ಕೀಟ ಸಂಕುಲ ಉಳಿಸುವ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸುವ ಅವಕಾಶ ನಿಮಗೆ ಸಿಕ್ಕಿದೆ. ಅರಣ್ಯವನ್ನು ರಕ್ಷಿಸಿ’ ಎಂದು ಕರೆ ನೀಡಿದರು.
ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚೌವ್ಹಾಣ್ ಕಾರ್ಯಕ್ರಮದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.