ADVERTISEMENT

ಅರಣ್ಯದಲ್ಲಿ ರೆಸಾರ್ಟ್‌ ತೆರವುಗೊಳಿಸಿ: ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 0:00 IST
Last Updated 11 ನವೆಂಬರ್ 2025, 0:00 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕಬಿನಿ, ಬಂಡೀಪುರ ಸೇರಿದಂತೆ ಹುಲಿ ಸಂರಕ್ಷಿತ ಪ್ರದೇಶ ಗಳಲ್ಲಿ ಸಫಾರಿ ಬಂದ್‌ ಮಾಡಿರುವಂತೆ ಅರಣ್ಯ ಪ್ರದೇಶದಲ್ಲಿರುವ ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸಬೇಕು’ ಎಂದು ಅರಣ್ಯ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಸಮಾಜದ ಉಪಾಧ್ಯಕ್ಷ ವಲ್ಲಿಶ್ರೀ ವಾಸುಕಿ, ಕಾರ್ಯದರ್ಶಿ ಶಿವರಾಜ್ ಆಗ್ರಹಿಸಿದರು. 

ADVERTISEMENT

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಬಿನಿ, ಬಂಡೀಪುರದ ವ್ಯಾಪ್ತಿ ಯಲ್ಲಿರುವ ಬಹುತೇಕ ರೆಸಾರ್ಟ್‌ಗಳು ರಾಜಕಾರಣಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೇರಿವೆ. ಈ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಫೈರ್‌ ಕ್ಯಾಂಪ್‌ ಮಾಡಿ ವನ್ಯಜೀವಿಗಳಿಗೆ ತೊಂದರೆ ಕೊಡುವ ಕೆಲಸಗಳು ನಡೆಯುತ್ತಿವೆ. ಆದ್ದರಿಂದ ಈ ಭಾಗದಲ್ಲಿ ಮಾನವ ವನ್ಯಜೀವಿಗಳ ಸಂಘರ್ಷಗಳು ಹೆಚ್ಚಾಗುತ್ತಿವೆ’ ಎಂದು ದೂರಿದರು.   

‘ಎಚ್.ಡಿ. ಕೋಟೆ ಭಾಗದಲ್ಲಿ ಇತ್ತೀಚೆಗೆ ಮಾನವನ ಮೇಲೆ ದಾಳಿ ಮಾಡಿದ ಹುಲಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಅವುಗಳನ್ನು ಮತ್ತೆ ಕಾಡಿನಲ್ಲಿ ಬಿಡಲಾಗುತ್ತದೆಯೇ? ಆ ಹುಲಿಗಳ ಜೊತೆಗೆ ಏನು ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.