ADVERTISEMENT

ದಾವಣಗೆರೆ: ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ ನಿಧನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 6:06 IST
Last Updated 7 ಫೆಬ್ರುವರಿ 2026, 6:06 IST
<div class="paragraphs"><p>ಮೋತಿ ವೀರಣ್ಣ</p></div>

ಮೋತಿ ವೀರಣ್ಣ

   

ದಾವಣಗೆರೆ: ಮಾಜಿ ಶಾಸಕ‌ ಯಜಮಾನ್ ಮೋತಿ ವೀರಣ್ಣ (90) ಅವರು ಶನಿವಾರ ಬೆಳಿಗ್ಗೆ ನಿಧನರಾದರು. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು‌.

ಇವರಿಗೆ ಚಿತ್ರ ನಿರ್ಮಾಪಕ ಯಜಮಾನ್ ಮೋತಿ ರಾಜೇಂದ್ರ ಸೇರಿದಂತೆ ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ADVERTISEMENT

1989ರಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 29 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

2004ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಮೋತಿ ವೀರಣ್ಣ ಅವರ ಶಿಸ್ತು, ನಡವಳಿಕೆ ಮತ್ತು ಜಮೀನ್ದಾರಿ ಮನೆತನದ ಹಿನ್ನೆಲೆಯ ಕಾರಣಕ್ಕೆ ಅವರ ಹೆಸರಿನೊಂದಿಗೆ ‘ಯಜಮಾನ್’ ಎಂಬ ವಿಶೇಷಣ ಸೇರಿಕೊಂಡಿತ್ತು.

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾಗಿ, ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್‌ನ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ಅಂತ್ಯಕ್ರಿಯೆ:

ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಅವರ ಮಾತೆ ಗೌರಿ ನಿವಾಸದಲ್ಲಿ ಮೃತದೇಹದ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶನಿವಾರ ಸಂಜೆ ನಾಲ್ಕು ಗಂಟೆಗೆ ಹದಡಿ ರಸ್ತೆಯಲ್ಲಿರುವ ಯಜಮಾನ್ ಮೋತಿ ದೊಡ್ಡಪ್ಪ ಟ್ರಸ್ಟ್ ನಿವೇಶನದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.