
ಬೆಂಗಳೂರು: ‘ಮೊದಲ ಬಾರಿ ಆಯ್ಕೆಯಾಗಿರುವ ಶಾಸಕರ ಬೇಡಿಕೆ ತಪ್ಪೇನೂ ಅಲ್ಲ. ಹೊಸಬರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಹೈಕಮಾಂಡ್ ಮತ್ತು ಮುಖ್ಯಮಂತ್ರಿಗೆ ಬಿಟ್ಟ ವಿಚಾರ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
‘ಪಕ್ಷದಿಂದ ಗೆದ್ದವರೆಲ್ಲ ಸಚಿವರಾಗಲು ಅರ್ಹರಿದ್ದಾರೆ. ಆದರೆ, ಸಂಪುಟದಲ್ಲಿ 33 ಸ್ಥಾನ ಅಷ್ಟೆ ಇದೆ. ಹೊಸಬರೂ ಬೇಕು, ಹಳಬರೂ ಬೇಕು. ಪುನರ್‌ರಚನೆ ಬಗ್ಗೆ ಚರ್ಚೆ ನಡೆಯುತ್ತಿರುವುದರಿಂದ ಶಾಸಕರು ಪತ್ರ ಬರೆದಿರಬಹುದು. ಸಂಪುಟ ಪುನರ್‌ರಚನೆಯಾಗುತ್ತೊ, ನಾಯಕತ್ವ ಬದಲಾವಣೆಯಾಗುತ್ತೊ ಗೊತ್ತಿಲ್ಲ’ ಎಂದರು.
ದಲಿತ ಮುಖ್ಯಮಂತ್ರಿ ಕೂಗು ಮತ್ತೆ ಮುಂಚೂಣಿಗೆ ಬಂದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ, ‘ಈ ವಿಷಯ ಇನ್ನೂ ಹೆಚ್ಚು ಚರ್ಚೆ ಆಗಲಿ. ಅದರಲ್ಲಿ ನನಗೆ ತಪ್ಪು ಕಾಣಿಸುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.