ADVERTISEMENT

40ಕ್ಕೂ ಹೆಚ್ಚು ಬಣವೆ ಭಸ್ಮ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 19:00 IST
Last Updated 27 ಏಪ್ರಿಲ್ 2019, 19:00 IST
ಬಣವೆಗಳಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ನಿರತರಾಗಿದ್ದ ಗ್ರಾಮಸ್ಥರು
ಬಣವೆಗಳಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ನಿರತರಾಗಿದ್ದ ಗ್ರಾಮಸ್ಥರು   

ಶಿರಹಟ್ಟಿ (ಗದಗ ಜಿಲ್ಲೆ): ತಾಲ್ಲೂಕಿನ ಕೊಗನೂರ ಗ್ರಾಮದಲ್ಲಿ ಶನಿವಾರ ನಲವತ್ತಕ್ಕೂ ಹೆಚ್ಚು ಬಣವೆಗಳು ಹಾಗೂ ಐದು ಮನೆಗಳು ಭಸ್ಮವಾಗಿವೆ.

ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅದಾಗಲೇ ಬಹುತೇಕ ಬಣವೆಗಳು ಬೆಂಕಿಗೆ ಆಹುತಿಯಾಗಿದ್ದವು.

ಶಾರ್ಟ್‌ ಸರ್ಕಿಟ್‌ನಿಂದಾಗಿ ಹೊತ್ತಿಕೊಂಡ ಬೆಂಕಿ ನೋಡುನೋಡುತ್ತಲೇ ಬಣವೆಗಳನ್ನು ಆಪೋಶನ ತೆಗೆದುಕೊಳ್ಳುತ್ತ ಹೋಯಿತು. ಬೆಂಕಿ ನಂದಿಸಲು ಆಸ್ಪದವೇ ಆಗದಂತೆ ಹಬ್ಬಿದ ಜ್ವಾಲೆಯಿಂದಾಗಿ, ಮನೆಯೊಂದರಲ್ಲಿದ್ದ ಸಿಲಿಂಡರ್‌ ಸ್ಫೋಟಿಸಿತು. ಇದರಿಂದ ಮತ್ತಷ್ಟು ವ್ಯಾಪಿಸಿದ ಬೆಂಕಿಯ ಕೆನ್ನಾಲಿಗೆಗೆ ಐದು ಮನೆಗಳು ಹಾಗೂ ಐದು ಬೈಕ್‌ಗಳು ಸುಟ್ಟುಕರಕಲಾದವು.

ADVERTISEMENT

ಗ್ರಾಮದ 13 ಕ್ಕೂ ಹೆಚ್ಚು ರೈತರಿಗೆ ಸೇರಿದ ಬೃಹತ್‌ ಬಣವೆಗಳು ಬೆಂಕಿಗೀಡಾಗಿದ್ದರಿಂದ, ಜಾನುವಾರುಗಳಿಗೆ ಮೇವಿನ ಸಂಕಷ್ಟ ಎದುರಾಗಿದೆ. ತಹಶೀಲ್ದಾರ್‌ ಆಶಪ್ಪ ಸ್ಥಳಕ್ಕೆ ಭೇಟಿ ನೀಡಿ, ಹಾನಿಯನ್ನು ಅಂದಾಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.