ADVERTISEMENT

ಗಗನಯಾನ: ಎಸ್‌ಎಂಪಿಎಸ್‌ ಪರೀಕ್ಷೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 16:03 IST
Last Updated 9 ಜುಲೈ 2025, 16:03 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೃಪೆ: Gemini AI

ಬೆಂಗಳೂರು: ಗಗನಯಾನ ನೌಕೆಗೆ ಅಳವಡಿಸಲಾಗುವ ಸರ್ವಿಸ್‌ ಮಾಡ್ಯೂಲ್‌ ಪ್ರೊಪೆಲ್ಷನ್‌ ಸಿಸ್ಟಮ್‌ನ (ಎಸ್‌ಎಂಪಿಎಸ್‌) ಉಷ್ಣತೆ ಸ್ಥಿತಿಯ ಎರಡು ಪರೀಕ್ಷೆಗಳನ್ನು ಇಸ್ರೊ ಯಶಸ್ವಿಯಾಗಿ ನಡೆಸಿದೆ.

ADVERTISEMENT

ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೊ ಪ್ರೊಪೆಲ್ಷನ್‌ ಕೇಂದ್ರದಲ್ಲಿ ಅಲ್ಪಾವಧಿಯ ಈ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರೊಪೆಲ್ಷನ್‌ ಸಿಸ್ಟಮ್‌ ಅಂದರೆ, ಒತ್ತಡವನ್ನು ಸೃಷ್ಟಿಸಿ ನೂಕು ಬಲದ ಮೂಲಕ ನೌಕೆಯನ್ನು ನಿಗದಿತ ಕಕ್ಷೆಗೆ ಅಥವಾ ಪ್ರದೇಶಕ್ಕೆ ಕಳುಹಿಸುವ ಪ್ರಕ್ರಿಯೆ.

ಮೊದಲ ಪರೀಕ್ಷೆ 30 ಸೆಕೆಂಡುಗಳದ್ದಾಗಿದ್ದು, ಎರಡನೇ ಪರೀಕ್ಷೆ 100 ಸೆಕೆಂಡ್‌ಗಳಷ್ಟು ಅವಧಿಯಾಗಿತ್ತು. ಉಷ್ಣತೆ ಸ್ಥಿತಿಯ ಪರೀಕ್ಷೆಯ ಒಟ್ಟಾರೆ ನಿರ್ವಹಣೆ ನಿರೀಕ್ಷೆಯಂತೆ ಯಶಸ್ವಿಯಾಗಿ ನಡೆಯಿತು ಇಸ್ರೊ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.