ADVERTISEMENT

ಪಟ್ಟಾಭಿಷೇಕ ನಿಲ್ಲದು: ಪುಟ್ಟಸ್ವಾಮಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 20:10 IST
Last Updated 14 ಮೇ 2022, 20:10 IST
ಸಮಾರಂಭದ ಸಿದ್ದತೆಯನ್ನು ಪೂರ್ಣಾನಂದ ಪುರಿ ಶ್ರೀಗಳು ಪರಿಶೀಲಿಸಿದರು.
ಸಮಾರಂಭದ ಸಿದ್ದತೆಯನ್ನು ಪೂರ್ಣಾನಂದ ಪುರಿ ಶ್ರೀಗಳು ಪರಿಶೀಲಿಸಿದರು.   

ನೆಲಮಂಗಲ: ‘ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಉದ್ಘಾಟನೆ ಹಾಗೂ ಪೀಠಾರೋಹಣ ನಿಗದಿಯಂತೆ ಭಾನುವಾರ ನಡೆಯಲಿದೆ. ಮುಖ್ಯಮಂತ್ರಿ, ಸಚಿವರು ಹಾಗೂ ಹಿಂದುಳಿದ ವರ್ಗದ ಎಲ್ಲ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಪೂರ್ಣಾನಂದ ಪುರಿ ಶ್ರೀ ( ಬಿ.ಜೆ. ಪುಟ್ಟಸ್ವಾಮಿ) ತಿಳಿಸಿದರು.

‘ಜನಾಂಗದ ಅಭಿವೃದ್ದಿ ಸಹಿಸದ ಕೆಲವರು ನ್ಯಾಯಾಲಯದ ಮಧ್ಯಂತರ ಆದೇಶವನ್ನು ತಿರುಚಿ ತಡೆಯಾಜ್ಞೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ರಾಜ್ಯದಾದ್ಯಂತ ಜನರು ಆಗಮಿಸುವ ಸಂದರ್ಭದಲ್ಲಿ ತೊಂದರೆ ನೀಡುತ್ತಿರುವುದು ಬೇಸರ ತಂದಿದೆ. ಸಣ್ಣ ಜನಾಂಗವಾದ ಗಾಣಿಗರಿಗೆ ಪ್ರಥಮವಾಗಿ ಗುರುಪೀಠ ಸ್ಥಾಪಿಸಲು ಶ್ರಮವಹಿಸಿದ್ದೇನೆ’ ಎಂದರು.

ADVERTISEMENT

ಪಟ್ಟಾಭಿಷೇಕಕ್ಕೆ ತಡೆಯಾಜ್ಞೆ ಇಲ್ಲ’:‘ನ್ಯಾಯಾಲಯವು ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್‌ನ ಪೀಠಾಧಿಪತಿಯಾಗಿ ಪಟ್ಟಾಭಿಷೇಕ ಚಟುವಟಿಕೆ ನಿಲ್ಲಿಸಬೇಕೆಂದು ಹೇಳಿದೆ. ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿಯಾಗಿ ಪಟ್ಟಾಭಿಷೇಕ ಮಾಡಿಕೊಳ್ಳಲು ತಡೆಯಾಜ್ಞೆ ನೀಡಿರುವುದಿಲ್ಲ. ಕೆಲವರು ದುರುದ್ದೇಶದಿಂದ ನ್ಯಾಯಾಲಯದ ಆದೇಶವನ್ನು ತಿರುಚಿ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಹೈಕೋರ್ಟ್‌ ವಕೀಲ ಡಿ.ಪ್ರಭಾಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.