ADVERTISEMENT

ಆರೈಕೆ ಕೇಂದ್ರಗಳ 20 ಮಕ್ಕಳಿಗೆ ಕಿರುಕುಳ

ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 19:30 IST
Last Updated 6 ಏಪ್ರಿಲ್ 2021, 19:30 IST

ಮಂಗಳೂರು: ನಗರದ ಆರು ಮಕ್ಕಳ ಆರೈಕೆ ಕೇಂದ್ರಗಳಲ್ಲಿನ 20 ಮಕ್ಕಳು ಕಿರುಕುಳಕ್ಕೆ ಒಳಗಾಗಿರುವುದು ಮಾ.28ರಂದು ಇಲ್ಲಿ ನಡೆದ ‘ಕಾನೂನು ಅರಿವು–ನೆರವು’ ಕಾರ್ಯಕ್ರಮದಲ್ಲಿ ಬಹಿರಂಗಗೊಂಡಿದೆ.

ಈ ಪೈಕಿ ತಾಲ್ಲೂಕಿನ ಕುಂಪಲದ ಅನಾಥಾಶ್ರಮದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮೇಲ್ವಿಚಾರಕ, ಕೊಣಾಜೆಯ ಅಯೂಬ್ (52) ಎಂಬಾತನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆತನ ವಿರುದ್ಧ ಇನ್ನೂ ನಾಲ್ವರು ಮಕ್ಕಳು ಆರೋಪ ಮಾಡಿದ್ದಾರೆ.

‘ಮಕ್ಕಳಿಗಾಗಿ ಅರಿವು–ನೆರವು ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. 30 ಮಕ್ಕಳ ಆರೈಕೆ ಕೇಂದ್ರಗಳ 480 ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳಿಗೆ ಪ್ರಶ್ನಾವಳಿ ನೀಡಲಾಗಿದ್ದು, ಬಳಿಕ ಸಮಾಲೋಚನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕುಂಪಲದಲ್ಲಿ ಮಕ್ಕಳಿಗೆ ಲೈಂಗಿಕ ಹಾಗೂ ದೈಹಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ’ ಎಂದು ನಗರ ಪೊಲೀಸ್‌ ಕಮಿಷನರ್ ಶಶಿಕುಮಾರ್‌ ಎನ್. ಮಂಗಳವಾರ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.