ADVERTISEMENT

ಹಾವೇರಿ: ಪರೀಕ್ಷಾ ನಕಲು ತಡೆಗೆ ವಿದ್ಯಾರ್ಥಿಗಳ ತಲೆಗೆ ಬಾಕ್ಸ್ ಬಳಕೆ,ಡಿಡಿಪಿಯು ಗರಂ

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ 

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 13:08 IST
Last Updated 18 ಅಕ್ಟೋಬರ್ 2019, 13:08 IST
   

ಹಾವೇರಿ: ನಗರದ ಭಗತ್‌ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಪ್ರಥಮ ಪಿಯು ವಿದ್ಯಾರ್ಥಿಗಳ ಮುಖಕ್ಕೆಪೇಪರ್‌ ಬಾಕ್ಸ್‌(ಡಬ್ಬಿ) ಹಾಕಿಸಿ ಪರೀಕ್ಷೆ ಬರೆಸುತ್ತಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕಾಲೇಜಿನಲ್ಲಿ ಗುರುವಾರ ವಿಜ್ಞಾನ, ರಸಾಯನಶಾಸ್ತ್ರ, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ ಪರೀಕ್ಷೆಗಳು ನಡೆಯುತ್ತಿತ್ತು. ವಿದ್ಯಾರ್ಥಿಗಳಿಗೆ ಬಾಕ್ಸ್‌ ಹಾಕಿಸಿ ಪರೀಕ್ಷೆ ಬರೆಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರ ವಿರುದ್ಧ ನೋಟಿಸ್‌ ಜಾರಿ ಮಾಡಿದ್ದೇವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ(ಡಿಡಿಪಿಯು) ಎಸ್‌.ಸಿ.ಪೀರಜಾದೆ ಹೇಳಿದರು.

ಈ ರೀತಿಯ ಪ್ರಯೋಗ ಮಾಡುವ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ಆಲೋಚನೆಗಳು ಮತ್ತೆ ಮರುಕಳಿಸದಂತೆ ಎಲ್ಲ ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರಿಗೆ ಸೂಚನೆ ನೀಡಲು ಸಭೆ ಕರೆಯಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪರೀಕ್ಷೆಯಲ್ಲಿ ನಕಲು ತಡೆಯುವುದಕ್ಕೆ ಹೊಸ ಪ್ರಯೋಗವನ್ನು ಮಾಡಿದ್ದೆವು. ಇದರಲ್ಲಿ ದುರುದ್ದೇಶ ಇರಲಿಲ್ಲ. ವಿದ್ಯಾರ್ಥಿಗಳಿಗೆ ಇದರ ಕುರಿತು ಮುಂಚೆಯೇ ತಿಳಿಸಿದ್ದೇವು. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಾಮಾನ್ಯ ರೀತಿಯಲ್ಲಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಲಾಗಿದೆ ಎಂದು ಆಡಳಿತ ಮಂಡಳಿಯ ಎಂ.ಬಿ.ಸತೀಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.