ADVERTISEMENT

Dharmasthala |ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧದ ಅಪಪ್ರಚಾರ ಸಹಿಸಲ್ಲ: ಸುನಿಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2025, 6:50 IST
Last Updated 7 ಆಗಸ್ಟ್ 2025, 6:50 IST
<div class="paragraphs"><p> ಸುನಿಲ್ ಕುಮಾರ್</p></div>

ಸುನಿಲ್ ಕುಮಾರ್

   

ಬೆಂಗಳೂರು: 'ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ತನಿಖೆ, ಬುರುಡೆ ಶೋಧದ ನೆಪದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ನಡೆಯುವ ಅಪಪ್ರಚಾರವನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ' ಎಂದು ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಇಂದು (ಗುರುವಾರ) ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಹೋರಾಟ ಹಾಗೂ ತನಿಖೆ ಜನರ ನಂಬಿಕೆಯನ್ನು ಘಾಸಿಗೊಳಿಸುವಂತಿರಬಾರದು. ಸರ್ಕಾರ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜಾಗೃತಿಯ ಹೆಜ್ಜೆ ಇಡಲಿ. ಜನರು ಬೀದಿಗೆ ಇಳಿಯುವ ಸಂದರ್ಭ ಸೃಷ್ಟಿಯಾಗದಿರಲಿ' ಎಂದಿದ್ದಾರೆ.

ADVERTISEMENT

ಬುಧವಾರವೂ ಈ ಕುರಿತು ಪೋಸ್ಟ್ ಮಾಡಿದ್ದ ಸುನಿಲ್ ಕುಮಾರ್, 'ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಏನು ಮಾಡುತ್ತಿದೆ ? ಇದೇನು ತನಿಖೆಯೋ ? ದೊಂಬಿಯೋ? ಹಿಂದು ಶ್ರದ್ಧಾ ಕೇಂದ್ರದ ಮೇಲೆ ನಡೆಯುತ್ತಿರುವ ಯೋಜಿತ ಅಪಪ್ರಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯೂಟ್ಯೂಬರ್‌ಗಳು ಹಾಗೂ ಅನ್ಯಮತೀಯರ ಕೈಗೊಂಬೆಯಾಗಿ ಕುಣಿಯುತ್ತಿದೆಯೇ' ಎಂದು ಪ್ರಶ್ನಿಸಿದ್ದರು.

'ನಾಡಿನ ಪ್ರಮುಖ ವಾಹಿನಿಯ ಮೇಲೆ, ಸ್ಥಳೀಯ ನಾಗರಿಕರ ಮೇಲೆ ಈ ಹೋರಾಟಗಾರರ ಸೋಗಿನ ವ್ಯಕ್ತಿಗಳು ಹಲ್ಲೆ, ಗೂಂಡಾಗಿರಿ ಮಾಡುತ್ತಿದ್ದರೂ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಸಹನೆಗೂ ಒಂದು ಮಿತಿ ಇದೆ. ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ' ಎಂದು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರಿಗೆ ಟ್ಯಾಗ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.