ADVERTISEMENT

ನಾನು ಪ್ರಾಮಾಣಿಕ ಕಾರ್ಯಕರ್ತ, ಅದಕ್ಕಾಗಿ ಸೋನಿಯಾ ನನ್ನನ್ನು ಭೇಟಿ ಮಾಡಿದರು

ಕೆಪಿಸಿಸಿ ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 15:13 IST
Last Updated 26 ಅಕ್ಟೋಬರ್ 2019, 15:13 IST
   

ಬೆಂಗಳೂರು: ಸೋನಿಯಾ ಗಾಂಧಿ ಅವರ ಜೀವನದಲ್ಲಿ ಯಾವುದೇ ಜೈಲಿಗೆ ಹೋಗಿರಲಿಲ್ಲ. ನನ್ನನ್ನು ಭೇಟಿ ಮಾಡಿ ಸುಮಾರು40ನಿಮಿಷಗಳ ಕಾಲ ಚರ್ಚೆ ನಡೆಸಿದರು. ಇದು ನನ್ನ ಪಕ್ಷ ನನ್ನ ಮೇಲಿಟ್ಟಿರುವ ಪ್ರೀತಿಗೆ ಸಾಕ್ಷಿ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಅಲ್ಲದೆ, ತಿಹಾರ್ ಜೈಲಿನಲ್ಲಿದ್ದಾಗ ಯಾರು ಯಾರು ಬಂದು ಯಾವ ರೀತಿಯಲ್ಲಿ ಭೇಟಿ ಮಾಡಿದರು ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ನನ್ನನ್ನು ಭೇಟಿ ಮಾಡಲುನನ್ನ ಕುಟುಂಬದ ಸದಸ್ಯರಿಗೆ ಅವಕಾಶ ನೀಡಿರಲಿಲ್ಲ. ಆದರೆ, ಪಕ್ಷದ ಮುಖಂಡರಾದ ವೇಣುಗೋಪಾಲ್ ಅವರಿಗೆ ಅವಕಾಶ ನೀಡಿದೆ. ಅಲ್ಲಿ ನಾನು ಒಪ್ಪಿಗೆಕೊಟ್ಟರೆ ಮಾತ್ರ ಭೇಟಿ ಮಾಡಲು ಅವಕಾಶ ಇಲ್ಲದಿದ್ದರೆ, ಇಲ್ಲ. ಅಲ್ಲಿ ಹಲವು ಕಾನೂನುಗಳಿವೆ. ಅವುಗಳನ್ನು ಪಾಲಿಸಲೇಬೇಕು. ತಿಹಾರ್ , ಇಡಿ ವಿಚಾರ ಆ ಮೇಲೆ ಮಾತನಾಡುತ್ತೇನೆ ಎಂದರು.

ADVERTISEMENT

ಪರಮೇಶ್ವರ್ ಡಾಕ್ಟರ್ ಅಂತ ಹೇಳಿ ಭೇಟಿ ಮಾಡಿದ್ದರು

ದೇವೇಗೌಡರು ಬಂದರೂ ಭೇಟಿ ಮಾಡಲಿಲ್ಲ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆಸ್ಪತ್ರೆಯಲ್ಲಿ ಪರಮೇಶ್ವರ್‌‌ಗೆಮಾತ್ರ ಡಾಕ್ಟರ್ ಅಂತ ಹೇಳಿ ಒಂದು ಸ್ಟೆಥಾಸ್ಕೋಪ್ ಹಾಕಿ ನನ್ನನ್ನು ಭೇಟಿ ಮಾಡಿ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟೆ ಎಂದು ನೆನಪಿಸಿಕೊಂಡರು.

ಸೋನಿಯಾಗಾಂಧಿ ರಾಷ್ಟ್ರದ ಕಾರ್ಯಕರ್ತರಿಗೆ ತೋರದ ಪ್ರೀತಿಯನ್ನು ತೋರಿಸಿದ್ದಾರೆ. ಯಾಕೆಂದರೆ, ನಾನೊಬ್ಬಪ್ರಾಮಾಣಿಕ ಕಾರ್ಯಕರ್ತ, ನಾನು ಕಾಂಗ್ರೆಸ್ ಗೆ ಚಿರರುಣಿಯಾಗಿದ್ದೇನೆ. ಪಕ್ಷ ಸಂಕಷ್ಟದಲ್ಲಿರುವಾಗ ನೆರವಾಗಬೇಕು. ಅಧಿಕಾರದಲ್ಲಿದ್ದಾಗ ಸಹಾಯ ಮಾಡುವುದು ಬೇರೆ, ಅಧಿಕಾರ ಇಲ್ಲದಿದ್ದಾಗ ಸಹಾಯ ಮಾಡುವುದು ಮುಖ್ಯ ಎಂದರು.

ನಾನು ಮೊದಲು ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ನಾನು ಬಂಧನವಾದಾಗ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೆಹಲಿಯಲ್ಲಿ ತುಘಲಕ್ ಲೇನ್ ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಯುವಕರು ಬಡಿದಾಡಿದ್ದು, ಪೊಲೀಸರಿಗೆ ಗಾಬರಿಯಾಗಿಬಿಟ್ಟರು.

ಪ್ರತಿದಿನ 500 ರಿಂದ 1000 ಜನ ನನ್ನ ಕೋರ್ಟ್ ಗೆ ಬರುತ್ತಿದ್ದಾಗ ಬರುತ್ತಿದ್ದರು. ನನ್ನ ತಮ್ಮ ಊಟ ಕೊಡಿಸಲು ಸಾಧ್ಯವಾಗಲಿಲ್ಲ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.