ADVERTISEMENT

ಮೆಟ್ಟೂರು ಅಣೆಕಟ್ಟೆ ಭರ್ತಿ13 ಜಿಲ್ಲೆಗಳಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 12:48 IST
Last Updated 24 ಸೆಪ್ಟೆಂಬರ್ 2019, 12:48 IST

ಚೆನ್ನೈ: ಕರ್ನಾಟಕದಲ್ಲಿ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ನೀರಿನ ಒಳಹರಿವು 50,000 ಕ್ಯುಸೆಕ್‌ಗೆ ಏರಿದೆ.

ಈ ಹಿನ್ನೆಲೆಯಲ್ಲಿ 13 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾವೇರಿ ನದಿಪಾತ್ರದ ತಗ್ಗು ಪ್ರದೇಶದಲ್ಲಿರುವ ಜನರ ಸ್ಥಳಾಂತರ ಸೇರಿದಂತೆ ಮುಂಜಾಗ್ರತೆ ವಹಿಸಲು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಸೇಲಂ ಜಿಲ್ಲೆಯ ಮೆಟ್ಟೂರು ಜಲಾಶಯ ಬಹುತೇಕ ಭರ್ತಿಯಾಗಿದೆ. ಹೀಗಾಗಿ ಒಳಹರಿವಿನಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಗೆ ಬಿಡಲು ತೀರ್ಮಾನಿಸಲಾಗಿದೆ.

ADVERTISEMENT

ಕಂದಾಯ ಸಚಿವ ಆರ್‌.ಬಿ.ಉದಯಕುಮಾರ್ ಅವರು, ‘ಧರ್ಮಪುರಿ, ಕೃಷ್ಣಗಿರಿ, ಸೇಲಂ, ಈರೋಡ್, ನಮಕ್ಕಲ್, ಕರೂರ್, ತಿರುಚಿನಾಪಳ್ಳಿ, ಅರಿಯಾಲುರ್, ತಂಜಾವೂರ್, ತಿರುವರೂರ್, ಕಡಲೂರ್, ನಾಗಪಟ್ಟಿಣಂ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ’ ಎಂದರು.

ಕರುವೈ ಬೆಳೆಗೆ ಸಾಮಾನ್ಯವಾಗಿ ಜೂನ್‌ 12ರ ವೇಳೆಗೆ ಅಣೆಕಟ್ಟಿಯಿಂದ ನೀರು ಹರಿಸಲಾಗುತ್ತದೆ.ಈ ವರ್ಷ ಜಲಾಶಯದ ಒಳಹರಿವು ಹೆಚ್ಚಾದಂತೆ ಆಗಸ್ಟ್‌ 13ರಂದು ನೀರು ಹೊರಬಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.