ADVERTISEMENT

ಉದ್ಯಮಿಗಳು ಮಾತ್ರವಲ್ಲ ಕಾರ್ಮಿಕರ ಹಿತರಕ್ಷಣೆಯೂ ಸರ್ಕಾರದ ಕರ್ತವ್ಯ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಮೇ 2020, 9:30 IST
Last Updated 18 ಮೇ 2020, 9:30 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ   

ಬೆಂಗಳೂರು: ಕಾರ್ಮಿಕ‌ ಕಾಯ್ದೆಗಳಿಗೆ ಅವಸರದಲ್ಲಿ‌ ಮತ್ತು ಏಕಪಕ್ಷೀಯವಾಗಿ ತಿದ್ದುಪಡಿ ತರಲು ಹೊರಟಿರುವ ರಾಜ್ಯದ ಮುಖ್ಯಮಂತ್ರಿಗಳು ಕೊರೊನಾ ಹಾವಳಿಯಿಂದಾಗಿ ಕಷ್ಟದಲ್ಲಿರುವ ಕಾರ್ಮಿಕರ ಗಾಯದ ಮೇಲೆ ಬರೆ ಹಾಕಲು ಹೊರಟಂತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾ ಸೋಂಕಿನಿಂದಾಗಿ ನಷ್ಟದಲ್ಲಿರುವ ಉದ್ಯಮಗಳಿಗೆ ನೆರವಾಗುವುದೆಂದರೆ ಕಾರ್ಮಿಕರ‌‌ ನ್ಯಾಯಬದ್ಧ ಹಕ್ಕುಗಳನ್ನು‌ ಕಿತ್ತುಕೊಂಡು ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡುವುದಲ್ಲ. ಮಾಲೀಕರದ್ದು ಮಾತ್ರವಲ್ಲ, ಕಾರ್ಮಿಕರ ಹಿತರಕ್ಷಣೆ ಕೂಡಾ ಚುನಾಯಿತ ಸರ್ಕಾರದ ಕರ್ತವ್ಯ ಎಂದಿದ್ದಾರೆ.

ಕಾರ್ಮಿಕ‌ ಕಾಯ್ದೆಗಳಿಗೆ ತಿದ್ದುಪಡಿ‌‌ ಮಾಡುವ ಮೊದಲು ಕಾರ್ಮಿಕ‌ ಪ್ರತಿನಿಧಿಗಳ‌ ಜೊತೆಯೂ ಮುಖ್ಯಮಂತ್ರಿಗಳು ಮಾತುಕತೆ ನಡೆಸಬೇಕು. ವಿಧಾನಮಂಡಲ‌ ಅಧಿವೇಶನದಲ್ಲಿಯೂ ಚರ್ಚೆ ನಡೆಯಬೇಕು. ಈಗಿನ ಅವಸರದ ನಡೆಯ ಹಿಂದೆ ದುರುದ್ದೇಶದ ವಾಸನೆ ಹೊಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.