ADVERTISEMENT

ವಿಸ್ತೃತರೂಪ ಹೇಳಲು ಪರದಾಡಿದ ಸಚಿವ ಪ್ರಭು ಬಿ. ಚವ್ಹಾಣ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 22:30 IST
Last Updated 21 ಡಿಸೆಂಬರ್ 2022, 22:30 IST
ಪ್ರಭು ಚವ್ಹಾಣ್
ಪ್ರಭು ಚವ್ಹಾಣ್   

ಬೆಳಗಾವಿ: ಜಾನುವಾರುಗಳ ಕಾಯಿಲೆ ನಿಯಂತ್ರಣದ ಯೋಜನೆಗೆ ಸಂಬಂಧಿಸಿದಂತೆ ಪಶು ಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ ಅವರು ಇಂಗ್ಲಿಷ್‌ನಲ್ಲಿ ವಿಸ್ತೃತ ರೂಪ ಹೇಳಲು ಪರದಾಡಿದ ಪ್ರಸಂಗ ವಿಧಾನ ಪರಿಷತ್‌ನಲ್ಲಿ ಬುಧವಾರ ನಡೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಎಸ್.ಎಲ್‌. ಭೋಜೇಗೌಡ ಅವರು ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಗಳನ್ನು ನೀಗಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ಸಚಿವರು, ’ಪ್ರಸ್ತುತ 400 ಪಶುವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. 290 ಪಶು ವೈದ್ಯರನ್ನು ಕೇಂದ್ರ ಸರ್ಕಾರದ ಎಲ್‌ಎಚ್‌ಡಿಸಿ ಕಾರ್ಯಕ್ರಮದ ಅಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ‘ ಎಂದು ವಿವರಿಸಿದರು.

ADVERTISEMENT

’ಎಲ್‌ಎಚ್‌ಡಿಸಿ ಅಂದರೇನು? ಇದರ ವಿಸ್ತೃತ ವಿವರ ಏನು‘ ಎಂದು ಭೋಜೇಗೌಡ ಪ್ರಶ್ನಿಸಿದರು. ಚರ್ಮ ಗಂಟು ರೋಗ ಎಂದು ಸಚಿವರು ಪ್ರತಿಕ್ರಿಯಿಸಿದರು. ಇಂಗ್ಲಿಷ್‌ನಲ್ಲಿ ಹೇಳಿ ಎಂದು ಪದೇ, ಪದೇ ಕೇಳಿದರೂ ಚರ್ಮ ಗಂಟು ರೋಗ ಎಂದೇ ಉತ್ತರಿಸಿದರು. ಆಗ ಸದಸ್ಯರು ನಗೆಗಡಲಲ್ಲಿ ತೇಲಿದರು.

ಕೊನೆಗೆ ಅಧಿಕಾರಿಗಳು ನೀಡಿದ ವಿವರವನ್ನು ಓದಿದ ಸಚಿವರು ’ಲೈವ್‌ಸ್ಟಾಕ್‌ ಹೆಲ್ತ್‌ ಡಿಸೀಸ್‌ ಕಂಟ್ರೋಲ್‌‘ (ಜಾನುವಾರು ಆರೋಗ್ಯ ಕಾಯಿಲೆ ನಿಯಂತ್ರಣ) ಎಂದು ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.