ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2022, 2023 ಮತ್ತು 2024ನೇ ಸಾಲಿನ ‘ಪುಸ್ತಕ ಸೊಗಸು’ ಹಾಗೂ ‘ಮುದ್ರಣ ಸೊಗಸು’ ಬಹುಮಾನಗಳನ್ನು ಬುಧವಾರ ಪ್ರಕಟಿಸಿದೆ.
2022ನೇ ವರ್ಷದ ಬಹುಮಾನ ವಿವರ
‘ಪುಸ್ತಕ ಸೊಗಸು’ ಮೊದಲನೇ ಬಹುಮಾನಕ್ಕೆ ತುಮಕೂರು ದೀಪಂಕರ ಪುಸ್ತಕ ಪ್ರಕಾಶನ ಸಂಸ್ಥೆಯ ಕೇಶವ ಮಳಗಿ ಅವರ ‘ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್ ಗದ್ಯ ಗಾರುಡಿ’ ಕೃತಿ ಆಯ್ಕೆಯಾಗಿದೆ. ದ್ವಿತೀಯ ಬಹುಮಾನಕ್ಕೆ ಬೆಂಗಳೂರಿನ ಯುವಸಾಧನೆ ಪ್ರಕಾಶನದ ಜಿ.ಕೆ.ದೇವರಾಜಸ್ವಾಮಿ ಅವರ ‘ಅಧಿಷ್ಠಾನ ಬಾಯಿಪಾಠ ಪುಸ್ತಕ’ ಕೃತಿ, ಮೂರನೇ ಬಹುಮಾನಕ್ಕೆ ತುಮಕೂರಿನ ಜಲಜಂಬೂ ಲಿಂಕ್ಸ್ ಪ್ರಕಾಶನದ ರವಿಕುಮಾರ್ ನೀಹ ಅವರ ‘ಅರಸು ಕುರನ್ಗರಾಯ’ ಕೃತಿ ಆಯ್ಕೆಯಾಗಿದೆ.
ಈ ಬಹುಮಾನಗಳು ಕ್ರಮವಾಗಿ ₹25 ಸಾವಿರ, ₹20 ಸಾವಿರ ಮತ್ತು ₹10 ಸಾವಿರ ನಗದು ಒಳಗೊಂಡಿದೆ.
ಮಕ್ಕಳ ಪುಸ್ತಕ ಸೊಗಸು ಬಹುಮಾನಕ್ಕೆ ಬೆಂಗಳೂರಿನ ಗೀತಾಂಜಲಿ ಪಬ್ಲಿಕೇಷನ್ಸ್ ಪ್ರಕಟಿತ ಕುರುವ ಬಸವರಾಜ್ ಅವರ ‘ಮಲ್ಲಿಗೆ’ ಕೃತಿ ಆಯ್ಕೆಯಾಗಿದೆ. ಮುಖಪುಟ ಚಿತ್ರವಿನ್ಯಾಸ ಬಹುಮಾನಕ್ಕೆ ರಾಯಚೂರಿನ ಕಲಾವಿದ ಎಚ್.ಎಚ್.ಮ್ಯಾದಾರ್ ವಿನ್ಯಾಸಗೊಳಿಸಿ ರಚಿಸಿರುವ ‘ಅಮೂಲ್ಯ ಮತ್ತು ಡಾ.ರಾಜಕುಮಾರ್ ಕುರಿತ ನೂರಾರು ಚುಕ್ಕಿ ಚಿತ್ರ ಸಂಪುಟ’ ಆಯ್ಕೆಯಾಗಿದೆ. ಮಣಿಪಾಲದ ಕಲಾವಿದೆ ರೇವತಿ ನಾಡಿಗೇರ್ ಅವರ ವಿನ್ಯಾಸಗೊಳಿಸಿರುವ ಪಾರ್ವತಿ ಜಿ. ಐತಾಳ್ ಅವರ ‘ಮಾಧವಿ ಕಥನ– ಕಥನ ಕಾವ್ಯ’ ಕೃತಿ ಆಯ್ಕೆಯಾಗಿದೆ. ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಬೆಂಗಳೂರಿನ ಯಂತ್ರೋದ್ಧಾರಕ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್ಸ್ ಮುದ್ರಿಸಿರುವ ಬೇಲೂರು ರಘುನಂದನ್ ಅವರ ‘ಚಿಟ್ಟೆ–ಏಕವ್ಯಕ್ತಿ ಮಕ್ಕಳ ನಾಟಕ’ ಆಯ್ಕೆಯಾಗಿದೆ.
ಈ ಬಹುಮಾನಗಳು ಕ್ರಮವಾಗಿ ₹8 ಸಾವಿರ, ₹10 ಸಾವಿರ, ₹8 ಸಾವಿರ ಮತ್ತು ₹5 ಸಾವಿರ ನಗದು ಒಳಗೊಂಡಿದೆ.
2023ನೇ ವರ್ಷದ ಬಹುಮಾನ ವಿವರ
‘ಪುಸ್ತಕ ಸೊಗಸು’ ಮೊದಲನೇ ಬಹುಮಾನಕ್ಕೆ ಬೆಂಗಳೂರು ಆರ್ಟ್ ಫೌಂಡೇಷನ್ ಪ್ರಕಾಶನದ ‘ಡಾ.ಆರ್.ಎಚ್.ಕುಲಕರ್ಣಿ ಹಾಗೂ ಎಚ್.ಎ.ಅನಿಲ್ ಕುಮಾರ್ ಅವರ ‘ದೃಶ್ಯಕಲಾ ಕಮಲ’ ಕೃತಿ ಆಯ್ಕೆಯಾಗಿದೆ. ದ್ವಿತೀಯ ಬಹುಮಾನಕ್ಕೆ ಶಿವಮೊಗ್ಗದ ಗೀತಾಂಜಲಿ ಪ್ರಕಾಶನ ಪ್ರಕಟಿಸಿರುವ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಅವರ ‘ಕಾಡುಗೊಲ್ಲ ಬುಡಕಟ್ಟು ಕುಲಕಥನ’ ಕೃತಿ ಮತ್ತು ಮೂರನೇ ಬಹುಮಾನಕ್ಕೆ ಕಲಬುರಗಿಯ ಸರಚಂದ್ರ ಪ್ರಕಾಶನ ಪ್ರಕಟಿತ ಡಾ.ಮಲ್ಲಿಕಾರ್ಜುನ ಸಿ. ಬಾಗೋಡಿ ಅವರ ‘ಚಿತ್ರ ಭಿತ್ತಿ’ ಕೃತಿ ಆಯ್ಕೆಯಾಗಿದೆ.
ಈ ಬಹುಮಾನಗಳು ಕ್ರಮವಾಗಿ ₹25 ಸಾವಿರ, ₹20 ಸಾವಿರ ಮತ್ತು ₹10 ಸಾವಿರ ನಗದು ಒಳಗೊಂಡಿದೆ.
‘ಮಕ್ಕಳ ಪುಸ್ತಕ ಸೊಗಸು’ ಬಹುಮಾನಕ್ಕೆ ಮಂಗಳೂರಿನ ಕಥಾಬಿಂದು ಪ್ರಕಾಶನ ಪ್ರಕಟಿತ ಪರವೀನ್ ಬಾನು ಎಂ. ಶೇಖ ಅವರ ‘ಬಾಲ ಮಂದಾರ’ ಕೃತಿ ಆಯ್ಕೆಯಾಗಿದೆ. ಮುಖಪುಟ ಚಿತ್ರವಿನ್ಯಾಸ ಬಹುಮಾನಕ್ಕೆ ಕಲಾವಿದ ಸಂತೋಷ್ ಸಸಿಹಿತ್ಲು ವಿನ್ಯಾಸಗೊಳಿಸಿರುವ ಡಾ. ಲಲಿತಾ ಕೆ. ಹೊಸಪ್ಯಾಟಿ ಅವರ ‘ಬ್ಯೂಟಿ ಬೆಳ್ಳಕ್ಕಿ ಮಕ್ಕಳ ಕಥೆಗಳು’ ಕೃತಿ, ಮುಖಪುಟ ಚಿತ್ರಕಲೆಯ ಬಹುಮಾನಕ್ಕೆ ಕಲಾವಿದ ಡಿ.ಕೆ.ರಮೇಶ್ ಅವರು ವಿನ್ಯಾಸಗೊಳಿಸಿರುವ ಚಂದ್ರಕಾಂತ ಪೋಕಳೆ ಅವರ ‘ಬಿಡಾರ ಆತ್ಮಕಥೆ’ ಕೃತಿ ಆಯ್ಕೆಯಾಗಿದೆ. ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಬೆಂಗಳೂರಿನ ಜ್ವಾಲಾಮುಖಿ ಮುದ್ರಣಾಲಯ ಪ್ರೈ.ಲಿ. ಮುದ್ರಿಸಿದ ಡಾ.ಎಸ್.ಗುರುಮೂರ್ತಿ ‘ಕಂಬದಹಳ್ಳಿ ಕಂಬಾಪುರಿಯ ಪಂಚಕೂಟ ಬಸದಿ’ ಕೃತಿ ಆಯ್ಕೆಯಾಗಿದೆ.
ಈ ಬಹುಮಾನಗಳು ಕ್ರಮವಾಗಿ ₹8 ಸಾವಿರ, ₹10 ಸಾವಿರ, ₹8 ಸಾವಿರ ಮತ್ತು ₹5 ಸಾವಿರ ನಗದು ಒಳಗೊಂಡಿದೆ.
2024ನೇ ವರ್ಷದ ಬಹುಮಾನ ವಿವರ
‘ಪುಸ್ತಕ ಸೊಗಸು’ ಮೊದಲನೇ ಬಹುಮಾನಕ್ಕೆ ಬೆಂಗಳೂರಿನ ಎಂ.ಮುನಿಸ್ವಾಮಯ್ಯ ಆ್ಯಂಡ್ ಸನ್ಸ್ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್ ಪ್ರಕಟಿತ, ಪ್ರೊ.ಕೆ.ಸಿ.ಶಿವಾರೆಡ್ಡಿ ಅವರ ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು ಸಂಪುಟಗಳು’ ಕೃತಿ ಆಯ್ಕೆಯಾಗಿದೆ. ದ್ವಿತೀಯ ಬಹುಮಾನಕ್ಕೆ ದಾವಣಗೆರೆಯ ಅನಿಮಿಷ ಪ್ರಕಾಶನದ ಕೆ.ಸಿ.ಶ್ರೀನಾಥ್ ಅವರ ‘ಶಕ್ತಿನದಿ ಶರಾವತಿ’ ಕೃತಿ ಹಾಗೂ ಮೂರನೇ ಬಹುಮಾನಕ್ಕೆ ಬೆಂಗಳೂರಿನ ಅಮೂಲ್ಯ ಪ್ರಕಾಶನ ಪ್ರಕಟಿತ ಸ್ವಾಮಿ ಪೊನ್ನಾಚಿ ಅವರ ‘ಕಾಡು ಹುಡುಗನ ಹಾಡು ಪಾಡು’ ಕೃತಿ ಆಯ್ಕೆಯಾಗಿದೆ.
ಈ ಬಹುಮಾನಗಳು ಕ್ರಮವಾಗಿ ₹25 ಸಾವಿರ, ₹20 ಸಾವಿರ ಮತ್ತು ₹10 ಸಾವಿರ ನಗದು ಒಳಗೊಂಡಿದೆ.
‘ಮಕ್ಕಳ ಪುಸ್ತಕ ಸೊಗಸು’ ಬಹುಮಾನಕ್ಕೆ ಧಾರವಾಡದ ಚಿಲಿಪಿಲಿ ಪ್ರಕಾಶನ ಪ್ರಕಟಿತ ಚಂದ್ರಗೌಡ ಕುಲಕರ್ಣಿ ಅವರ ‘ಕನ್ನಡ ನುಡಿ ಚಂದ ಚಿಲಿಪಿಲಿ ಶ್ರೀಗಂಧ’ ಕೃತಿ ಆಯ್ಕೆಯಾಗಿದೆ. ಮುಖಪುಟ ಚಿತ್ರವಿನ್ಯಾಸ ಬಹುಮಾನಕ್ಕೆ ಕಲಾವಿದ ಬಾಗಲಕೋಟೆಯ ಲಕ್ಷ್ಮಣ ಬಾದಾಮಿ ವಿನ್ಯಾಸಗೊಳಿಸಿ, ರಚಿಸಿರುವ ‘ಮಾತಿಗಿಳಿದ ಚಿತ್ರ’ ಕೃತಿ ಆಯ್ಕೆಯಾಗಿದೆ. ಮುಖಪುಟ ಚಿತ್ರಕಲೆಯ ಬಹುಮಾನಕ್ಕೆ ಕಲಾವಿದ ಮದನ್ ಸಿ.ಪಿ ಅವರು ವಿನ್ಯಾಸಗೊಳಿಸಿದ ಕಪಿಲ.ಪಿ.ಹುಮನಾಬಾದೆ ಅವರ ‘ಬಣಮಿ’ ಕೃತಿ ಮತ್ತು ‘ಪುಸ್ತಕ ಮುದ್ರಣ ಸೊಗಸು’ ಬಹುಮಾನಕ್ಕೆ ಮಂಡ್ಯದ ಅವಿನಾಶ್ ಗ್ರಾಫಿಕ್ಸ್ ಮುದ್ರಿಸಿದ ಡಾ. ಶ್ರೀನಿವಾಸಯ್ಯ ಎನ್.ವೈ ಮತ್ತು ಎಂ.ಯು.ಶ್ವೇತ ರಚಿಸಿದ ‘ಮತ್ತೆ ಮತ್ತೆ ಶಂಕರಗೌಡ ತಲೆಮಾರಿನಂತರದ ಮನಸುಗಳ ಇಣಕು–ನೋಟ’ ಕೃತಿ ಆಯ್ಕೆಯಾಗಿದೆ.
ಈ ಬಹುಮಾನಗಳು ಕ್ರಮವಾಗಿ ₹8 ಸಾವಿರ, ₹10 ಸಾವಿರ, ₹8 ಸಾವಿರ ಮತ್ತು ₹5 ಸಾವಿರ ನಗದು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.