ADVERTISEMENT

ಮುಸ್ಲಿಂ ವ್ಯಾಪಾರಿಗಳ ಅನುಪಸ್ಥಿತಿಯಲ್ಲಿ ಕಾಪು ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:46 IST
Last Updated 23 ಮಾರ್ಚ್ 2022, 19:46 IST

ಕಾಪು (ಉಡುಪಿ ಜಿಲ್ಲೆ): ಪ್ರಸಿದ್ಧ ಕಾಪು ಮಾರಿಗುಡಿ ಜಾತ್ರೆಯು ಮೊದಲ ಬಾರಿಗೆ ಮುಸ್ಲಿಂ ವ್ಯಾಪಾರಿಗಳ ಅನುಪಸ್ಥಿತಿಯಲ್ಲಿ ಬುಧವಾರ ಮುಕ್ತಾಯವಾಯಿತು.

ವ್ಯಾಪಾರ ಮಾಡಲು ಅನುಮತಿ ನೀಡುವಂತೆ ಕೊನೆಯ ಕ್ಷಣದವರೆಗೂ ಮುಸ್ಲಿಂ ವ್ಯಾಪಾರಿಗಳು ಮಾಡಿದ ಮನವಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಒಪ್ಪಿಗೆ ಸಿಗಲಿಲ್ಲ. ಪರಿಣಾಮ ಮುಸ್ಲಿಂ ವ್ಯಾಪಾರಿಗಳು ಜಾತ್ರೆಯಿಂದ ಹೊರಗುಳಿಯಬೇಕಾಯಿತು.

ದೇವಸ್ಥಾನದ ಆವರಣದಲ್ಲಿ ಮುಸ್ಲಿಮರ ಬದಲಾಗಿ ಹಿಂದೂ ವ್ಯಾಪಾರಿಗಳೇ ಕೋಳಿ ಮಾರಾಟ ಮಳಿಗೆ, ಹೂ ಹಣ್ಣು, ಐಸ್‌ಕ್ರೀಂ, ಜ್ಯೂಸ್‌ ಕೇಂದ್ರಗಳನ್ನು ತೆರೆದಿದ್ದರು. ಎಲ್ಲ ಮಳಿಗೆಗಳಿಗೂ ಕೇಸರಿ ಧ್ವಜಗಳನ್ನು ಹಾಕಲಾಗಿತ್ತು. ಜಾತ್ರೆಯಲ್ಲಿ ಈ ಬಾರಿ ಸುಮಾರು 200 ಮಳಿಗೆಗಳಲ್ಲಿ ಒಟ್ಟಾರೆ ಸುಮಾರು ₹10 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.