
ಬೆಳಗಾವಿ: ‘ಪಂಜಾಬ್‌ನಂತಹ ಸಣ್ಣ ರಾಜ್ಯದಲ್ಲೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್ ಹೈಕಮಾಂಡ್ ₹500 ಕೋಟಿ ಬೆಲೆ ನಿಗದಿ ಮಾಡಿದ್ದರೆ, ಕರ್ನಾಟಕದಂತಹ ಸಂಪದ್ಭರಿತ ರಾಜ್ಯದಲ್ಲಿ ಎಷ್ಟು ನಿಗದಿ ಮಾಡಿರಬಹುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
ಪಂಜಾಬ್‌ನ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ಪತ್ನಿಯ ಹೇಳಿಕೆಯನ್ನು ಉಲ್ಲೇಖಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅಶೋಕ, ‘ನಾಯಕತ್ವ ಬದಲಾವಣೆ ವಿಷಯ ದೆಹಲಿಯಲ್ಲಿ ನಮ್ಮ ಐದಾರು ಜನರ ನಡುವಿನ ‘ಗುಟ್ಟಿನ ವ್ಯಾಪಾರ’ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದು, ಬಹುಶಃ ಇದೇ ಕಾರಣಕ್ಕೆ ಇರಬಹುದು’ ಎಂದಿದ್ದಾರೆ.
‘ಒಟ್ಟಿನಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಕರ್ನಾಟಕವನ್ನು ಎಟಿಎಂ ಸರ್ಕಾರ ಮಾಡಿಕೊಳ್ಳುವ ಕಾಂಗ್ರೆಸ್ ಹೈಕಮಾಂಡ್ ಕನ್ನಡಿಗರನ್ನು ಬ್ರಿಟಿಷರಿಗಿಂತ ಹೆಚ್ಚು ಲೂಟಿ ಮಾಡುತ್ತಿದೆ’ ಎಂದು ಅಶೋಕ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.