ADVERTISEMENT

Cold Wave | ರಾಜ್ಯದಲ್ಲಿ ಮೈಕೊರೆಯುವ ಚಳಿ: ಬೀದರ್‌ನಲ್ಲಿ ದಾಖಲೆಯ ತಾಪಮಾನ ಕುಸಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2025, 11:39 IST
Last Updated 14 ಡಿಸೆಂಬರ್ 2025, 11:39 IST
   

ಬೆಂಗಳೂರು: ರಾಜ್ಯದಲ್ಲಿ ತಾಪಮಾನ ತೀವ್ರ ಕುಸಿತ ಕಂಡಿದೆ. 21 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಇದೆ. ಬೀದರ್‌ನಲ್ಲಿ ಅತಿ ಕಡಿಮೆ ಅಂದರೆ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಮುಂದಿನ 5 ದಿನಗಳ ಕಾಲ ಶೀತಗಾಳಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶೀತ ಗಾಳಿ: ಆರೆಂಜ್ ಅಲರ್ಟ್

ಉತ್ತರ ಒಳನಾಡಿನ ಕೆಲವೆಡೆ ಮುಂದಿನ 48 ಗಂಟೆಗಳ ಕಾಲ ತೀವ್ರ ಸ್ವರೂಪದ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ADVERTISEMENT

ಇಂದು ರಾಜ್ಯದ ಉತ್ತರ ಒಳನಾಡಿನ ಬೀದ‌ರ್, ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿಯಲ್ಲಿ ತೀವ್ರ ಸ್ವರೂಪದ ಶೀತ ಗಾಳಿ ಬೀಸುವ ಸಾಧ್ಯತೆಯಿದ್ದು, ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಜನರು ಎಚ್ಚರಿಕೆ ವಹಿಸಬೇಕು ಎಂದೂ ಹೇಳಿದೆ.

ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ದಾಖಲಾದ ಕನಿಷ್ಠ ತಾಪಮಾನದ ವಿವರವನ್ನು ಹವಾಮಾನ ಇಲಾಖೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಅದರ ವಿವರ ಹೀಗಿದೆ.

ಜಿಲ್ಲೆ –ತಾಪಮಾನ

  • ಬೀದರ್ –7

  • ಚಿಕ್ಕಬಳ್ಳಾಪುರ–7.1

  • ಧಾರವಾಡ–7.4

  • ತುಮಕೂರು–7.4

  • ಚಿಕ್ಕಮಗಳೂರು–7.6

  • ಬೆಳಗಾವಿ– 7.8

  • ಹಾಸನ–8.3

  • ಕೊಡಗು–8.5

  • ಬಾಗಲಕೋಟೆ–8.6

  • ಹಾವೇರಿ-8.7

  • ಮೈಸೂರು-8.8

  • ವಿಜಯನಗರ-8.8

  • ಗದಗ-9

  • ವಿಜಯಪುರ-9.3

  • ಕಲಬುರಗಿ-9.4

  • ಮಂಡ್ಯ-9.7

  • ಉತ್ತರ ಕನ್ನಡ-9.8

  • ಕೋಲಾರ-9.9

  • ಕೊಪ್ಪಳ-9.9

  • ಚಾಮರಾಜನಗರ-10

  • ಶಿವಮೊಗ್ಗ-10

  • ಬಳ್ಳಾರಿ-10.1

  • ಬೆಂಗಳೂರು ದಕ್ಷಿಣ-10.1

  • ಚಿತ್ರದುರ್ಗ–10.2

  • ದಾವಣಗೆರೆ–10.2

  • ರಾಯಚೂರು–10.2

  • ಬೆಂಗಳೂರು ಗ್ರಾಮಾಂತರ–10.4

  • ಬೆಂಗಳೂರು ನಗರ–10.8

  • ಯಾದಗಿರಿ–11.4

  • ಉಡುಪಿ–14.4

  • ದಕ್ಷಿಣ ಕನ್ನಡ-15.5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.