ಬೆಂಗಳೂರು: ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, ಉಭಯ ಪಕ್ಷದ ನಾಯಕರ ನಿಲುವುಗಳು ನಾನೊಂದು ತೀರಾ... ನೀನೊಂದು ತೀರಾ ಎಂಬಂತಾಗಿದೆ ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಘಟಕ, ಕಣ್ಣೀರ್ ಸ್ವಾಮಿಯನ್ನು ಕ್ಯಾರೇ ಎನ್ನದ ಬಿಜೆಪಿ. ಬಿಸಿಲಿನ ಬೇಗೆಯಲ್ಲಿ ಬ್ರದರ್ ಸ್ವಾಮಿ ಕುಟುಂಬಕ್ಕೆ ಕಣ್ಣೀರು ಪ್ರಾಪ್ತಿ! ಎಂದು ಲೇವಡಿ ಮಾಡಿದೆ.
ರಾಜ್ಯ ಬಿಜೆಪಿ ಹಾಗೂ ಜನತಾ ದಳದ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, ಉಭಯ ಪಕ್ಷದ ನಾಯಕರ ನಿಲುವುಗಳು ನಾನೊಂದು ತೀರಾ... ನೀನೊಂದು ತೀರಾ ಎಂಬಂತಾಗಿದೆ!. ಬಿಜೆಪಿಗರು ತಾವು ಮಾಡುವ ಸುಳ್ಳಿನ ಹೋರಾಟಕ್ಕಾಗಲಿ, ಸಮಾಜದ ಸ್ವಾಸ್ತ್ಯವನ್ನು ಹಾಳುಮಾಡುವ ಕಾರ್ಯಕಲಾಪಗಳಿಗೆ ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಿದೆ ಮೂಲೆಗುಂಪು ಮಾಡಿದ್ದಾರೆ ಎಂದು ಕುಟುಕಿದೆ.
ಒಟ್ಟಿನಲ್ಲಿ ಈಗಾಗಲೇ ಬಣ ಬಡಿದಾಟದಿಂದ ಬಾಡಿರುವ ಕಮಲದಲ್ಲಿ, ಮುಂದೆ ದಳಗಳೂ ಉದುರಿ ಒಣಗಿದ ಕಡ್ಡಿಯೊಂದೇ ಉಳಿದುಕೊಳ್ಳುವುದು ಶತಸಿದ್ಧ ಎಂದೂ ಟೀಕಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.