ಸಿದ್ದರಾಮಯ್ಯ ಹಾಗೂ ಪ್ರಜಾವಾಣಿ ವರದಿ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಮಳೆ ಕಣ್ಮರೆಯಾಗಿ ಬರಗಾಲ ಆವರಿಸುತ್ತದೆ ಎಂಬ ಬಿಜೆಪಿ ಮೂದಲಿಕೆಗಳಿಗೆ, ಕಾಂಗ್ರೆಸ್ ಇಂದಿನ ಪ್ರಜಾವಾಣಿ ವಿಶೇಷ ವರದಿಯನ್ನು ಹಂಚಿಕೊಂಡು ‘ಮಳೆ ಸಾಕಾ... ಬೇಕಾ...! ಎಂದು ತೀಕ್ಷ್ಣ ತಿರುಗೇಟು ನೀಡಿದೆ.
ಈ ಕುರಿತು ಇಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್, ‘ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೆ ರಾಜ್ಯದಲ್ಲಿ ಮಳೆ ಕಣ್ಮರೆಯಾಗಿ ಬರಗಾಲ ಆವರಿಸುತ್ತದೆ ಎಂದೆಲ್ಲಾ ಕಟ್ಟುಕತೆ ಕಟ್ಟಿ ವಾಟ್ಸ್‌ಆ್ಯಪ್ ಯೂನಿವರ್ಸಿಟಿಯಲ್ಲಿ ಹರಿಬಿಡುತ್ತಿದ್ದ ಬಿಜೆಪಿ ನಾಯಕರು ಇಂದು ದಿನವಿಡೀ ಕೊಡೆ ಹಿಡಿದುಕೊಂಡು ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದೆ.
ಸಾಮಾನ್ಯವಾಗಿ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಜೂನ್ ತಿಂಗಳಿನಲ್ಲಿ 100 ಅಡಿ ತಲುಪುತ್ತಿತ್ತು, ಆದರೆ, ಈ ಬಾರಿ ಮೇ ತಿಂಗಳಿನಲ್ಲಿಯೇ 100 ಅಡಿ ತಲುಪುವ ಮೂಲಕ ಕಳೆದ 35 ವರ್ಷಗಳಲ್ಲಿಯೇ ಮೊದಲ ಬಾರಿ ದಾಖಲೆಯ ನೀರು ಸಂಗ್ರಹವಾಗಿದೆ ಎಂದು ವರದಿಯನ್ನು ಹಂಚಿಕೊಂಡಿದೆ.
ನುಡಿದಂತೆ ನಡೆಯುವ ಗ್ಯಾರಂಟಿ ಸರ್ಕಾರದ ಜನಪರ ಆಡಳಿತಕ್ಕೆ ವರುಣನು ಕೈ ಜೋಡಿಸುವ ಮೂಲಕ ಆಡಿಕೊಳ್ಳುತ್ತಿದ್ದವರಿಗೆ ಮತ್ತಷ್ಟು ಸಂಕಟದ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ನೆರೆ ಸಾಧ್ಯತೆ ಇರುವ ಪ್ರದೇಶಗಳಲ್ಲಿ ನಮ್ಮ ಸರ್ಕಾರ ಈಗಾಗಲೇ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.