ADVERTISEMENT

ಸೋಂಕಿತರು ಹೋಮ್ ಐಸೋಲೇಷನ್‌ ಆದ ಒಂದು ಗಂಟೆಯೊಳಗೆ ವೈದ್ಯಕೀಯ ಕಿಟ್: ಡಿಸಿಎಂ

​ಪ್ರಜಾವಾಣಿ ವಾರ್ತೆ
Published 13 ಮೇ 2021, 19:31 IST
Last Updated 13 ಮೇ 2021, 19:31 IST
ಡಾ.ಸಿ.ಎನ್.‌ ಅಶ್ವತ್ಥನಾರಾಯಣ
ಡಾ.ಸಿ.ಎನ್.‌ ಅಶ್ವತ್ಥನಾರಾಯಣ    

ಬೆಂಗಳೂರು: ‘ಕೊರೊನಾ ಸೋಂಕಿತರು ಹೋಮ್‌ ಐಸೋಲೇಷನ್‌ ಆದ ಒಂದು ಗಂಟೆಯೊಳಗೆ ವೈದ್ಯಕೀಯ ಕಿಟ್ ತಲುಪಿಸಲಾಗುವುದು’ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಿಟ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ, ತಕ್ಷಣವೇ 5 ಲಕ್ಷ ಕಿಟ್‌ ಖರೀದಿಸಲು ನಿರ್ಧರಿಸಲಾಗಿದೆ’ ಎಂದರು.

‘10 ದಿನಕ್ಕೆ ಸಾಕಾಗುವಷ್ಟು ರೋಗ ಮತ್ತು ಸೋಂಕು ನಿರೋಧಕ ಔಷಧಗಳು, ವೈರಸ್‌ ನಿರೋಧಕ, ವಿಟಮಿನ್‌ ಮತ್ತು ಕಾಲ್ಟಿಸಿನ್‌ ಮಾತ್ರೆ, ರೋಗ ಉಲ್ಬಣ ಆಗುವುದನ್ನು ತಡೆಯುವ ಔಷಧಗಳು ಈ ಕಿಟ್‌ನಲ್ಲಿ ಇರುತ್ತವೆ. ಜತೆಗೆ ಟೆಲಿ ಕನ್ಸಲ್‌ಟೆನ್ಸಿ ಸೌಲಭ್ಯವೂ ಇರುತ್ತದೆ’ ಎಂದರು.

ADVERTISEMENT

‘ರಾಜ್ಯದೆಲ್ಲಡೆ ಈ ಕಿಟ್‌ ಕೊಡುತ್ತಿದ್ದರೂ ವಿಳಂಬವಾಗುತ್ತಿದೆ. ಮೇ 15ರಿಂದ ಒಂದು ಗಂಟೆಯಲ್ಲೇ ಕಿಟ್‌ ತಲುಪಿಸಲಾಗುವುದು. ಪ್ರತಿ ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 24X‌7 ಇವು ಲಭ್ಯ ಇರುತ್ತವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.