ADVERTISEMENT

ಸುಧಾಕರ್ ಆರೋಗ್ಯ ಇಲಾಖೆಗೆ ಹಿಡಿದ ಗ್ರಹಣ, ಕಮಿಷನ್ ಒಂದೇ ಅವರ ಧ್ಯೇಯ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜನವರಿ 2023, 11:02 IST
Last Updated 29 ಜನವರಿ 2023, 11:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಆರೋಗ್ಯ ಇಲಾಖೆಗೆ ಹಿಡಿದ ಗ್ರಹಣವಿದ್ದಂತೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆರೋಗ್ಯ ಇಲಾಖೆಯ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿರುವ ವಿಶೇಷ ಲೇಖನಗಳನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.

‘ಇತ್ತೀಚಿಗೆ ನಡೆದ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ ಗರ್ಭಿಣಿ, ಮಗುವಿನ ಸಾವಿನ ಪ್ರಕರಣ ರಾಜ್ಯದ ಆರೋಗ್ಯ ಇಲಾಖೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ. ಕೊರೊನಾ ಸಮಯದಲ್ಲಿನ ಸವಾಲುಗಳಿಂದ ಪಾಠ ಕಲಿಯದ, ಸುಧಾರಣಾ ಕ್ರಮ ಕೈಗೊಳ್ಳದ ಸಚಿವ ಸುಧಾಕರ್ ಅವರು ಆರೋಗ್ಯ ಇಲಾಖೆಗೆ ಹಿಡಿದ ಗ್ರಹಣವಿದ್ದಂತೆ. ಕಮಿಷನ್ ಒಂದೇ ಅವರ ಧ್ಯೇಯ!’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ADVERTISEMENT

‘108 ಆಂಬುಲೆನ್ಸ್ ಅವ್ಯವಸ್ಥೆಗಳು, ವೆಂಟಿಲೇಟರ್ ಅವ್ಯವಸ್ಥೆಯಿಂದ ಬಳ್ಳಾರಿ ವಿಮ್ಸ್‌ನಲ್ಲಿನ ಸಾವುಗಳು, ಹಾಸನದಲ್ಲಿ ಚಿಕಿತ್ಸೆ ನಿರಾಕರಿಸಿ ಗರ್ಭಿಣಿಯ ಸಾವು, ಚಾಮರಾಜನಗರ ಆಕ್ಸಿಜನ್ ದುರಂತ, ಕಾರ್ಯನಿರ್ವಹಿಸದ ಡಯಾಲಿಸಿಸ್ ಕೇಂದ್ರಗಳು, ಒಂದೇ ಬೆಡ್‌ನಲ್ಲಿ 3 ರೋಗಿಗಳು... ಇದಕ್ಕೆ ಆರೋಗ್ಯ ಇಲಾಖೆಗೆ ಹಿಡಿದ 'ಸುಧಾಕರ್' ಎಂಬ ಗ್ರಹಣವೇ ಕಾರಣ’ ಎಂದು ಕಾಂಗ್ರೆಸ್‌ ಗುಡುಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.