ADVERTISEMENT

‘ಕರ್ನಾಟಕ ಹಿಂದೂ ಪಾರ್ಟಿ’ ಕಟ್ಟುತ್ತೇವೆ: ಯತ್ನಾಳ

ಯೋಗಿ ಆದಿತ್ಯನಾಥ್ ರೀತಿ ಆಡಳಿತ ಕರ್ನಾಟಕದಲ್ಲಿ ಬರಲಿದೆ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 14:25 IST
Last Updated 11 ಸೆಪ್ಟೆಂಬರ್ 2025, 14:25 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ಮದ್ದೂರು (ಮಂಡ್ಯ ಜಿಲ್ಲೆ): ‘ನಾನು ಮತ್ತು ಪ್ರತಾಪ ಸಿಂಹ ಹಿಂದೂಗಳ ಪರವಾಗಿ ಗಟ್ಟಿಯಾಗಿ ಮಾತನಾಡುತ್ತೇವೆ. ನಾವೆಲ್ಲ ಒಂದಾಗಿ ರಾಜ್ಯದಲ್ಲಿ ‘ಕರ್ನಾಟಕ ಹಿಂದೂ ಪಾರ್ಟಿ’ ಕಟ್ಟುತ್ತೇವೆ. ಆ ಪಕ್ಷದ ಗುರುತು ಜೆಸಿಬಿ. ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ತೆಗೆದು ಹಿಂದೂಗಳಿಗೆ ಹಂಚುತ್ತೇನೆ, ಅಕ್ರಮವಾಗಿ ಕಟ್ಟಿದ ಮಸೀದಿಗಳನ್ನು ನೆಲಸಮಗೊಳಿಸುತ್ತೇವೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. 

ಮದ್ದೂರು ಘಟನೆಯಲ್ಲಿ ಗಾಯಗೊಂಡವರ ಮನೆಗಳಿಗೆ ಗುರುವಾರ ಭೇಟಿ ನೀಡಿ, ಸಾಂತ್ವನ ಹೇಳಿದ ನಂತರ ಹಿಂದುತ್ವಪರ ಕಾರ್ಯಕರ್ತರನ್ನು ಉದ್ದೇಶಿಸಿ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ADVERTISEMENT

ರಾಜ್ಯದ ಬಿಜೆಪಿಯವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಗೌರವಯುತವಾಗಿ ತೆಗೆದುಕೊಳ್ಳದಿದ್ದರೆ, ರಾಜ್ಯದಲ್ಲಿ ಹೊಸ ಸರ್ಕಾರ ತರುತ್ತೇವೆ. ‘ಪಾಕಿಸ್ತಾನಕ್ಕೆ ಜೈ’ ಎಂದು ಧ್ವಜ ಹಾರಿಸಿದ್ರೆ ಅಲ್ಲೇ ಎನ್‌ಕೌಂಟರ್ ಮಾಡುತ್ತೇವೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರೀತಿ ಆಡಳಿತ ಕರ್ನಾಟಕದಲ್ಲಿ ಬರಲಿದೆ. ನಮ್ಮ ಸರ್ಕಾರ ಇದ್ದಾಗ ನನ್ನನ್ನು ಮಂತ್ರಿ ಮಾಡಲಿಲ್ಲ. ನಾನು ಗೃಹಮಂತ್ರಿ ಇದ್ದಿದ್ರೆ ಇವರ ಬಾಯಲ್ಲಿ ಗುಂಡು ಹಾಕುತ್ತಿದ್ದೆ’ ಎಂದರು.  

‘ನಾನು ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಮಾಡುವವರು ಢಮಾರ್‌, ವಕ್ಫ್ ಅನುದಾನವನ್ನು ಗೋರಕ್ಷಕರಿಗೆ ನೀಡುತ್ತೇನೆ. ಮೃತರ ಮೆರವಣಿಗೆ ವೇಳೆ ತಮಟೆ ಬಾರಿಸಲು ಮದ್ದೂರಿನ ಮಸೀದಿ ಮುಂದೆ ಬಿಡುತ್ತಿಲ್ಲವಂತೆ. ನಮ್ಮ ಸರ್ಕಾರ ಬಂದರೆ ಮಸೀದಿ ಮುಂದೆ ಒಂದು ಗಂಟೆ ಡ್ಯಾನ್ಸ್ ಮಾಡಲು ಅವಕಾಶ ಕೊಡುತ್ತೇನೆ. 2028ಕ್ಕೆ ಎಲ್ಲರೂ ವಿಧಾನಸೌಧದ ಮುಂದೆ ಭಗವಧ್ವಜ ತರ್ತೀರಾ? ನನ್ನನ್ನು ಕರ್ನಾಟಕ ಸಿಎಂ ಮಾಡ್ತೀರಾ? ಎಂದು ಕಾರ್ಯಕರ್ತರನ್ನು ಕೇಳಿದರು.

‘ಮಂಡ್ಯ ಜಿಲ್ಲೆಯ ಜನರು ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಯಾರಿಗೂ ಹೆದರುವುದಿಲ್ಲ. ಮಂಡ್ಯ ಜಿಲ್ಲೆಯಿಂದಲೇ ನನ್ನ ಯುದ್ಧ ಪ್ರಾರಂಭ. ಹಿಂದುತ್ವಪರ ಕಾರ್ಯಕರ್ತರಿಗೆ ಕಲ್ಲು ಹೊಡೆದವರಿಗೆ ಸರಿಯಾದ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.

ಮುಸ್ಲಿಂ ಏಜೆಂಟರಂತೆ ಕೆಲಸ ಮಾಡಬೇಡಿ:

‘ಗಣೇಶ ಮೆರವಣಿಗೆಯಲ್ಲಿ ಡಿ.ಜೆ ಹಾಕಬೇಡಿ ಅಂತ ಸರ್ಕಾರ ನಿರ್ಬಂಧ ಹಾಕುತ್ತದೆ. ಆದರೆ, ಅವರು ದಿನಕ್ಕೆ ಐದು ಬಾರಿ ಮೈಕ್‌ ಹಾಕ್ತಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಪರಮೇಶ್ವರ್‌ ಅವರೇ ನಿಮಗೆ ತಾಕತ್‌ ಇದ್ದರೆ ಮಸೀದಿ ಮೈಕ್‌ ಅನ್ನು ನಿಲ್ಲಿಸಿ. ಮುಸ್ಲಿಂ ಏಜೆಂಟಗಳಂತೆ ಕೆಲಸ ಮಾಡಬೇಡಿ. ಹಾಲುಮತದಲ್ಲಿ ಹುಟ್ಟಿದ ಸಿದ್ದರಾಮಯ್ಯನವರು ಕುಂಕುಮ, ಪೇಟಾ ಬೇಡ ಅಂತಾರೆ. ಸಾಬರ ಟೋಪಿ ಹಾಕಿಕೊಳ್ತಾರೆ. ನೇಪಾಳದ ಪರಿಸ್ಥಿತಿ ಬರುವ ಮೊದಲೇ ಎಚ್ಚೆತ್ತುಕೊಳ್ಳಿ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.