ವಿಧಾನ ಪರಿಷತ್ ಕಲಾಪ
– ಪ್ರಜಾವಾಣಿ ಚಿತ್ರ
ಬೆಂಗಳೂರು: ವಿಧಾನಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಎರಡು ವಿಶೇಷ ವರದಿಗಳು ಪ್ರಸ್ತಾಪವಾದವು.
ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಿಂದ ಸರ್ಕಾರಿ ಶಾಲೆಗಳ ವಾರ್ಷಿಕ ನಿರ್ವಹಣೆಗೆ ಬಿಡುಗಡೆಯಾಗುವ ಶಾಲಾನುದಾನ ಹಾಗೂ ಕ್ರೀಡಾ ಅನುದಾನವು ಶಿಕ್ಷಕರ ನಡುವೆ ವೈಮನಸ್ಸಿಗೆ ಕಾರಣವಾಗುತ್ತಿರುವ ಕುರಿತು ಆ.17ರಂದು ಪ್ರಕಟವಾದ ‘ಅಸಮಾಧಾನಕ್ಕೆ ಕಾರಣವಾಗುವ ಅನುದಾನ’ ವರದಿಯನ್ನು ಬಿಜೆಪಿಯ ಭಾರತಿ ಶೆಟ್ಟಿ ಪ್ರಸ್ತಾಪಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಾಗ ಭಿನ್ನ ಕೆನೆಪದರ ನೀತಿ ಅನ್ವಯಿಸುತ್ತಿರುವುದರಿಂದಾಗಿ, ವೇತನದಾರರ ಮಕ್ಕಳು ಅಖಿಲ ಭಾರತ ಹಾಗೂ ರಾಜ್ಯ ಕೋಟಾದಡಿ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವಾಗ ತಾರತಮ್ಯ ಅನುಭವಿಸುತ್ತಿದ್ದಾರೆ ಎಂಬ ಕುರಿತು ಜುಲೈ 31ರಂದು ಪ್ರಕಟವಾದ ‘ಭಿನ್ನ ಕೆನೆಪದರ ನೀತಿ;ವಿದ್ಯಾರ್ಥಿಗಳಿಗೆ ಫಜೀತಿ‘ ವರದಿಯನ್ನು ಬಿಜೆಪಿಯ ಶಶೀಲ್ ನಮೋಶಿ ಪ್ರಸ್ತಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.