ADVERTISEMENT

ನಿಮ್ಮ ಬಣವನ್ನು ಡಿಕೆಶಿ ಚಿಂದಿ ಮಾಡುವರೆಂಬ ಭಯವಿದೆಯೇ?: ಸಿದ್ದರಾಮಯ್ಯಗೆ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2022, 9:33 IST
Last Updated 8 ಮಾರ್ಚ್ 2022, 9:33 IST
ಸಿದ್ದರಾಮಯ್ಯ – ಪ್ರಜಾವಾಣಿ ಸಂಗ್ರಹ ಚಿತ್ರ
ಸಿದ್ದರಾಮಯ್ಯ – ಪ್ರಜಾವಾಣಿ ಸಂಗ್ರಹ ಚಿತ್ರ   

ಬೆಂಗಳೂರು: ನಿಮ್ಮ ಬಣವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಚಿಂದಿ ಮಾಡುತ್ತಾರೆ ಎಂಬ ಭಯ ಕಾಡುತ್ತಿದೆಯೇ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ.

‘ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಪ್ರಶ್ನೆ ಬಂದಾಗ ನೀವು ಮೌನಕ್ಕೆ ಶರಣಾಗುವುದೇಕೆ? ನಿಮ್ಮ ಬಣವನ್ನು ಡಿಕೆಶಿ ಅವರು ಚಿಂದಿ ಮಾಡುತ್ತಾರೆ ಎಂಬ ಭಯ ಕಾಡುತ್ತಿದೆಯೇ? ಅಥವಾ ಒಳ ಜಗಳ ಅನಾವರಣವಾದರೆ ಜನರು ತಿರಸ್ಕರಿಸಬಹುದೆಂಬ ಆತಂಕವೋ?’ ಎಂದು ಬಿಜೆಪಿಯ ರಾಜ್ಯ ಘಟಕ ಟ್ವೀಟ್ ಮಾಡಿದೆ.

ಡಿ.ಕೆ. ಶಿವಕುಮಾರ್ ವಿರುದ್ಧ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರಿಗೆ ಜನರ ಪರಿಚಯ ಇಲ್ಲವೋ ಅವರಿಗೆ ಮಾತ್ರ ದೊಡ್ಡ ಫೋಟೋ ಇರುವ ಪೋಸ್ಟರ್ ಬೇಕಾಗುತ್ತದೆ ಎಂದಿರುವುದು ಡಿಕೆಶಿಯವರನ್ನೇ ಉದ್ದೇಶಿಸಿ ಅಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.