ADVERTISEMENT

ದೇಶದ ಆಂತರಿಕ ವಿಚಾರವನ್ನು ವಿದೇಶಗಳೊಂದಿಗೆ ಹಂಚಿಕೊಳ್ಳುವುದು ಎಷ್ಟು ಸರಿ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 14:15 IST
Last Updated 3 ಏಪ್ರಿಲ್ 2021, 14:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೇಶದ ಆಂತರಿಕ ವಿಚಾರವನ್ನು ಅಮೆರಿಕ ಪ್ರತಿನಿಧಿಯೊಂದಿಗೆ ಪ್ರಸ್ತಾಪಿಸಿರುವುದು ಎಷ್ಟು ಸರಿ? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಕೇರಳದ ವಯನಾಡು ಸಂಸದ ರಾಹುಲ್‌ ಗಾಂಧಿ ಭಾರತದ ಆಂತರಿಕ ವಿಚಾರವನ್ನು ಅಮೆರಿಕ ಪ್ರತಿನಿಧಿಯೊಂದಿಗೆ ಪ್ರಸ್ತಾಪಿಸಿರುವುದು ಎಷ್ಟು ಸರಿ?, ಪ್ರಧಾನಿ ಮೋದಿ ಅವರನ್ನು ಸೋಲಿಸಲು ಪಾಕಿಸ್ತಾನದ ನೆರವು ಕೇಳಿದ ಮಣಿಶಂಕರ್‌ ಅಯ್ಯರ್. ಚೀನಾ ಪಕ್ಷದೊಂದಿಗೆ ರಾಹುಲ್‌ ಗಾಂಧಿ ಒಪ್ಪಂದ. ಭಾರತ ವಿರೋಧಿಗಳೊಂದಿಗೆ ಕಾಂಗ್ರೆಸ್‌ ನಿಯತ್ತು ತೋರುವುದೇಕೆ?’ ಎಂದು ವಾಗ್ದಾಳಿ ನಡೆಸಿದೆ.

‘ಭಾರತದ ಆಂತರಿಕ ವಿಚಾರವನ್ನು ವಿದೇಶಗಳೊಂದಿಗೆ ಹಂಚಿಕೊಳ್ಳುವ ಮೂಲಕ ರಾಹುಲ್‌ ಗಾಂಧಿ ದೇಶದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಕರ್ನಾಟಕದ ಯುವ ಕಾಂಗ್ರೆಸ್ ವಿಭಾಗದ‌ ಆಂತರಿಕ ಚುನಾವಣೆಯನ್ನೇ ಕಾಂಗ್ರೆಸ್ ಸರಿಯಾಗಿ ನಿಭಾಯಿಸಲಿಲ್ಲ. ಆಂತರಿಕ ಚುನಾವಣೆ ನಿರ್ವಹಿಸಲಾಗದವರು‌ ದೇಶದ ಚುನಾವಣೆಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ’ ಎಂದು ವ್ಯಂಗ್ಯವಾಡಿದೆ.

ADVERTISEMENT

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.