ADVERTISEMENT

ಮಳೆಯಿಲ್ಲ, ಬಿಸಿಲಿಲ್ಲ, ಮೆಟ್ಟಿಲು ಇಳಿಯಲು ಛತ್ರಿ ಬಿಚ್ಚುವರು ಮೋದಿ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2021, 12:36 IST
Last Updated 23 ಸೆಪ್ಟೆಂಬರ್ 2021, 12:36 IST
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಬಂದಿಳಿದ ಸಂದರ್ಭ –ಪಿಟಿಐ ಚಿತ್ರ
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಬಂದಿಳಿದ ಸಂದರ್ಭ –ಪಿಟಿಐ ಚಿತ್ರ    

ಬೆಂಗಳೂರು: ಮಳೆಯಿಲ್ಲ, ಬಿಸಿಲಿಲ್ಲ ಕೇವಲ 20 ಮೆಟ್ಟಿಲು ಇಳಿಯಲು ಛತ್ರಿ ಬಿಚ್ಚುವರು ಪ್ರಧಾನಿ ಮೋದಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಅಮೆರಿಕಕ್ಕೆ ತೆರಳಿರುವ ಪ್ರಧಾನಿ ಮೋದಿ ಅವರನ್ನು ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಅಲ್ಪನಿಗೆ ಐಶ್ವರ್ಯ ಸಿಕ್ಕರೆ.. ವಿಮಾನದ ಮೆಟ್ಟಿಲಿಳಿಯಲು ಛತ್ರಿ ಬಿಚ್ಚುವನು. ಮೋದಿ ಜೀ ತಮ್ಮ ಪಿಆರ್‌ ಏಜೆನ್ಸಿ ಹೇಳಿದ ಟಾಸ್ಕ್‌ ಅನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಮಳೆಯಿಲ್ಲ, ಬಿಸಿಲಿಲ್ಲ, ಕೇವಲ 20 ಮೆಟ್ಟಿಲು ಇಳಿಯಲು ಛತ್ರಿ ಬಿಚ್ಚುತ್ತಾರೆ. ನಮ್ಮ ಪ್ರಧಾನಿಗೆ ವಿದೇಶಿಯರೆದುರು ನಗೆಪಾಟಲಿಗೆ ಈಡಾಗುವುದು ಅಭ್ಯಾಸವಾಗಿಬಿಟ್ಟಿದೆ’ ಎಂದು ಕಿಡಿಕಾರಿದೆ.

ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಹಲವು ಉನ್ನತ ಮಟ್ಟದ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಸೆಪ್ಟೆಂಬರ್‌ 25ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) 76ನೇ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಶ್ವೇತ ಭವನದಲ್ಲಿ ಸೆಪ್ಟೆಂಬರ್‌ 24ರಂದು ಮೋದಿ–ಬೈಡನ್‌ ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದಾರೆ.

‘ಯಾವುದಕ್ಕೆ ಕೇಳಿದರೂ ಹಣವಿಲ್ಲ ಎನ್ನುತ್ತಿದ್ದ ಸರ್ಕಾರದಲ್ಲಿ ಆರ್ಥಿಕ ಶಿಸ್ತು ಇಲ್ಲದ ಪರಿಣಾಮ ರಾಜ್ಯದ ಮೇಲೆ ಸಾಲ ಹೊರಿಸಿದೆ. ಇತ್ತೀಚಿಗೆ ಸುಮಾರು ₹29 ಸಾವಿರ ಕೋಟಿ ಹಣ ಖರ್ಚಾಗದೆ ಉಳಿದಿರುವುದು ತಿಳಿದುಬಂದಿತ್ತು. ಈಗ 2,491 ಕೋಟಿ ಇಲಾಖೆಗಳ ಲೋಪದಿಂದ ನಷ್ಟವಾಗಿದೆ. ಬಿಜೆಪಿಯ ಭ್ರಷ್ಟಾಚಾರ ಹಾಗೂ ಆರ್ಥಿಕ ಅಶಿಸ್ತಿನಿಂದಲೇ ಖಜಾನೆ ಖಾಲಿಯಾಗಿದೆ’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.