ಬೆಂಗಳೂರು ನಗರದ ಬ್ರಿಗೇಡ್ ರಸ್ತೆಯಲ್ಲಿ ಮಳೆಯಲ್ಲಿ ಜನರು ಸಾಗುತ್ತಿರುವ ದೃಶ್ಯ
ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್
ಬೆಂಗಳೂರು ನಗರದ ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆ ಬಳಿ ಜನರು ಮಳೆಯಲ್ಲಿ ಸಾಗಿದರು
ಧಾರವಾಡದಲ್ಲಿ ಮಳೆ ಸುರಿಯಿತು
ಮಂಡ್ಯ ನಗರದ ಕೆಎಚ್‌ಬಿ ಬಡಾವಣೆಯಲ್ಲಿ ಹಾದುಹೋಗಿರುವ ಚಿನ್ನಗಿರಿದೊಡ್ಡಿ ರಸ್ತೆಯ ಇಕ್ಕೆಲಗಳಲ್ಲಿ ಇರುವ ಮನೆಗಳು ಮಳೆಯಿಂದ ಜಲಾವೃತವಾಗಿರುವ ದೃಶ್ಯ
ಶ್ರೀರಂಗಪಟ್ಟಣ ತಾಲ್ಲೂಕಿನ ಕೂಡಲಕುಪ್ಪೆ ಬಳಿ ಅಡ್ಡಹಳ್ಳಿ ಉಕ್ಕಿ ಹರಿದು ಕೃಷಿ ಜಮೀನು ಕೆರೆಯಂತಾಗಿತ್ತು
ಮಂಡ್ಯ ನಗರದ ಹೊರವಲಯದ ಹೊಳಲು ಮುಖ್ಯರಸ್ತೆಯ ಪಕ್ಕದ ಭತ್ತದ ಬೆಳೆ ಮಳೆ ನೀರಿಗೆ ಕೊಚ್ಚಿ ಹೋಗಿರುವ ದೃಶ್ಯ
ಚಿಕ್ಕಬಳ್ಳಾಪುರದ ಎಂ.ಜಿ ರಸ್ತೆಯಲ್ಲಿ ಮಳೆ ನೀರಿನ ಕೆಸರಿನಲ್ಲಿಯೇ ವಾಹನಗಳ ಓಡಾಟ
ಕೋಲಾರದ ಖಾದ್ರಿಪುರ ಬಳಿ ರೈಲ್ವೆ ಅಂಡರ್ ಪಾಸ್‌ನಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ, ಜನರ ಓಡಾಟಕ್ಕೆ ತೊಂದರೆ ಉಂಟಾಯಿತು
ದಾವಣಗೆರೆಯಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ರೈಲ್ವೆ ಕೆಳ ಸೇತುವೆಯಲ್ಲಿ ಮಳೆ ನೀರು ನಿಂತಿದ್ದು ಹಳೇ ದಾವಣಗೆರೆಯತ್ತ ಸಾಗಲು ವಾಹನ ಸವಾರರು ಪರದಾಡುವಂತಾಗಿತ್ತು
ಕೆಜಿಎಫ್ ನಗರದ ಫಿಶ್ ಲೈನ್ ಮನೆಗಳು ಮಳೆ ನೀರಿನಿಂದ ತುಂಬಿರುವುದು
ಮಳೆ ಸುರಿಯುತ್ತಿದ್ದಾಗ ಚಿತ್ರದುರ್ಗದ ಕೆಳಗೋಟೆಯ ಹಳೇ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ವಿದ್ಯಾರ್ಥಿನಿಯರು ನಡೆದುಕೊಂಡು ಬರುತ್ತಿರುವುದು
ಕಲಬುರಗಿಯಲ್ಲಿ ಶುಕ್ರವಾರ ಸುರಿದ ಮಳೆಯಿಂದ ರಸ್ತೆಯ ಮೇಲೆ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.