ADVERTISEMENT

ಮಳೆ ಜೋರು: ಕೃಷಿ ಚಟುವಟಿಕೆ ಚುರುಕು

ಹಾವೇರಿಯ 35, ವಿಜಯನಗರದ 23 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 19 ಮೇ 2022, 19:26 IST
Last Updated 19 ಮೇ 2022, 19:26 IST
ಬಾದಾಮಿ ಬೆಟ್ಟದ ಸುತ್ತ ಗುರುವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಯಿಂದ ಬೆಟ್ಟದ ಮೇಲಿಂದ ಧುಮ್ಮಿಕ್ಕುವ ಜೋಡಿ ಜಲಧಾರೆಗಳು ಒಂದಾಗಿ ಅಗಸ್ತ್ಯತೀರ್ಥ ಹೊಂಡಕ್ಕೆ ಸೇರಿದವು. ಭೂತನಾಥ ದೇವಾಲಯಗಳು ಅಗಸ್ತ್ಯತೀರ್ಥ ಹೊಂಡದಲ್ಲಿ ತೇಲುತ್ತಿರುವಂತೆ ಭಾಸವಾಗುತ್ತಿವೆ

ಹುಬ್ಬಳ್ಳಿ:ಧಾರವಾಡ– ಹುಬ್ಬಳ್ಳಿ, ಗದಗ, ಹಾವೇರಿ, ವಿಜಯನಗರ, ಬೆಳಗಾವಿ, ಉತ್ತರ ಕನ್ನಡ, ಬಾಗಲ
ಕೋಟೆ, ವಿಜಯಪುರ ಜಿಲ್ಲೆಗಳ ವಿವಿಧೆಡೆ ಬುಧವಾರ ತಡರಾತ್ರಿ ಹಾಗೂ ಗುರುವಾರ ನಿರಂತರವಾಗಿ ಮಳೆಯಾಗಿದೆ.

ಮಳೆಯಿಂದ ವಿಜಯನಗರ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಡೀ ಸುರಿದ ಬಿರುಸಿನ ಮಳೆಗೆ 23 ಮನೆಗಳಿಗೆ ಹಾನಿಯಾಗಿದೆ. ಅಂದಾಜು 250 ಎಕರೆ ಭತ್ತ ನಾಶವಾಗಿವೆ.ಅರಸೀಕೆರೆ ಹೋಬಳಿಯ ಸುತ್ತಮುತ್ತಲ ಚೆಕ್ ಡ್ಯಾಂಗಳು ತುಂಬಿದ್ದು ಮಳೆಯಲ್ಲಿಯೇ ಗ್ರಾಮಸ್ಥರು ಮೀನು ಹಿಡಿಯುತ್ತಿದ್ದ ದೃಶ್ಯ ಕಂಡುಬಂತು.

ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನಲ್ಲಿ 45 ಮನೆಗಳಿಗೆ, ಹಾವೇರಿ ಜಿಲ್ಲೆಯಲ್ಲಿ 35 ಮನೆಗಳಿಗೆ ಹಾನಿಯಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.