ADVERTISEMENT

ರಾಜ್ಯಸಭೆ: ಬಿಜೆಪಿಯ 75, ಕಾಂಗ್ರೆಸ್‌ನ 23, ಜೆಡಿಎಸ್‌ನ 7 ಶಾಸಕರಿಂದ ಮತ ಚಲಾವಣೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 5:02 IST
Last Updated 10 ಜೂನ್ 2022, 5:02 IST
ರಾಜ್ಯಸಭೆ ಚುನಾವಣೆ: ಮತ ಚಲಾಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ರಾಜ್ಯಸಭೆ ಚುನಾವಣೆ: ಮತ ಚಲಾಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಈವರೆಗೆ 105 ಶಾಸಕರು ಮತ ಚಲಾವಣೆ ಮಾಡಿದ್ದಾರೆ.

ಶುಕ್ರವಾರ ಬೆಳಿಗ್ಗೆ 9ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೂ ಮತದಾನ ನಡೆಯಲಿದೆ. ಈವರೆಗೆ ಬಿಜೆಪಿಯ 75, ಕಾಂಗ್ರೆಸ್‌ನ 23 ಮತ್ತು ಜೆಡಿಎಸ್‌ನ 7 ಶಾಸಕರು ಮತದಾನ ಮಾಡಿದ್ದಾರೆ.

ರಾಜ್ಯದಲ್ಲಿ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳ ಆಯ್ಕೆ ನಿರಾತಂಕವಾಗಿದೆ. ನಾಲ್ಕನೇ ಸ್ಥಾನಕ್ಕೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪರಸ್ಪರ ‘ಸಹಕಾರ’ ನೀಡದಿರುವ ಬಗ್ಗೆ ಬಿಗಿ ನಿಲುವು ತಳೆದಿವೆ. ಇದರ ಪರಿಣಾಮ ಶುಕ್ರವಾರ ನಡೆಯುವ ಮತದಾನ ವೇಳೆ ‘ಅಡ್ಡ ಮತದಾನ’ ಹಾಗೂ ಕೊನೆ ಕ್ಷಣದ ನಾಟಕೀಯ ಬೆಳವಣಿಗೆಗಳ ಸಾಧ್ಯತೆ ದಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.