ADVERTISEMENT

ಪ್ರವಾಹ: ಸಂಕಷ್ಟದ ಪರಿಸ್ಥಿತಿಯಲ್ಲೂ ಕುರಿಗಾಹಿಯ ನಡೆಗೆ ಮನಸೋತ ಎನ್‌ಡಿಆರ್‌ಎಫ್

ಏಜೆನ್ಸೀಸ್
Published 10 ಆಗಸ್ಟ್ 2020, 12:27 IST
Last Updated 10 ಆಗಸ್ಟ್ 2020, 12:27 IST
ಕುರಿಗಾಹಿ ಯುವಕನ ರಕ್ಷಣೆ ವೇಳೆ ಆತ ಹಿಡಿದಿರುವ ಸಾಕು ನಾಯಿ
ಕುರಿಗಾಹಿ ಯುವಕನ ರಕ್ಷಣೆ ವೇಳೆ ಆತ ಹಿಡಿದಿರುವ ಸಾಕು ನಾಯಿ   

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ರಕ್ಷಣಾ ಪಡೆ ಮಾತ್ರ ಕೆಲಸದ ಮಧ್ಯೆಯೂ ಜೀವನದ ಭರವಸೆಯಅನೇಕ ಕಥೆಗಳನ್ನು ಹುಡುಕುತ್ತಿರುತ್ತಾರೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸತ್ಯ ಪ್ರಧಾನ್ ಅವರು ಟ್ವೀಟ್ ಮಾಡಿದ್ದು, ಅದರಲ್ಲಿರುವ ಫೊಟೋ, ಕಷ್ಟಗಳ ನಡುವೆಯೂ ಜನರ ಹೋರಾಟದ ಮನೋಭಾವ ಮತ್ತು ಪ್ರಾಣಿಗಳೆಡೆಗಿನ ಸಹಾನುಭೂತಿಯನ್ನು ತೋರಿಸುತ್ತಿದೆ.

'ಈ ಚಿತ್ರವು ನನ್ನ ನೆನಪುಗಳಲ್ಲಿ ಉಳಿಯುತ್ತದೆ' ಎಂದು ಎನ್‌ಡಿಆರ್‌ಎಫ್‌ ಮಹಾನಿರ್ದೇಶಕರು ಮಾಡಿರುವ ಟ್ವೀಟ್‌ನಲ್ಲಿ, ಪ್ರವಾಹದಲ್ಲಿ ಸಿಲುಕಿದ್ದ ಕುರಿಗಾಹಿಯನ್ನುಎನ್‌ಡಿಆರ್‌ಎಫ್‌ ರಕ್ಷಿಸಿರುವ ವೇಳೆ ತೆಗೆದ ಫೊಟೊದಲ್ಲಿ ಆ ಯುವಕ ತನ್ನ ಸಾಕು ನಾಯಿಯನ್ನು ಹಿಡಿದು ಕುಳಿತಿದ್ದಾನೆ. ಆತನ ಸುತ್ತ ರಕ್ಷಣಾ ಪಡೆಯು ಸುತ್ತುವರೆದಿದ್ದಾರೆ.

'ಈ ಕುರಿಗಾಹಿ ಹುಡುಗನನ್ನು ಕೃಷ್ಣಾ ನದಿಯ ನೀರಿನಿಂದ ಎನ್‌ಡಿಆರ್‌ಎಫ್ ರಕ್ಷಿಸಿದೆ. ಆತನು ಅನೇಕ ಕುರಿಗಳನ್ನು ಬಿಟ್ಟು ಬರಲು ದುಃಖಿಸಿದ್ದನು. ಆದರೆ ನಾಯಿಯನ್ನು ತನ್ನೊಂದಿಗೆ ಕರೆತರಲು ಮನಸ್ಸು ಮಾಡಿದ್ದ. ಈ ಹುಡುಗನಿಗೆ ಸಹಾಯ ಮಾಡಿದ್ದಕ್ಕೆ ಸಂತೋಷವಾಗಿದೆ' ಎಂದು ಪ್ರಧಾನ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಕೊರಾನಾವೈರಸ್ ಸಾಂಕ್ರಾಮಿಕ ರೋಗದ ಮಧ್ಯೆ ಕುರಿಗಾಹಿಯು ಮಾಸ್ಕ್ ಹಾಕಿಕೊಂಡಿದ್ದಾನೆ. ರಕ್ಷಣಾ ಪಡೆಯು ಕೂಡ ಮಾಸ್ಕ್‌ಗಳನ್ನು ಹಾಕಿಕೊಂಡಿರುವುದು ಚಿತ್ರದಲ್ಲಿದೆ.

ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳು, ಕೆಲವು ಉತ್ತರದ ಜಿಲ್ಲೆಗಳು ಮತ್ತು ಕೊಡಗಿನಲ್ಲಿ ಗುಡುಗು ಸಹಿತ ತೀವ್ರ ಮಳೆಯಾಗುತ್ತಿದ್ದು ಸಂಕಷ್ಟಕ್ಕೆ ಸಿಲುಕಿದೆ.
ಪ್ರವಾಹದಲ್ಲಿ ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ತಂಡಗಳು ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಮತ್ತು ರಾಜ್ಯದ ಉತ್ತರದ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.