ADVERTISEMENT

ಜೂನ್‌ 6ರಿಂದ ಶಿಕ್ಷಕರ ವರ್ಗಾವಣೆ ಆರಂಭ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 14:28 IST
Last Updated 2 ಜೂನ್ 2023, 14:28 IST
   

ಬೆಂಗಳೂರು: ಹೆಚ್ಚುವರಿ ಶಿಕ್ಷಕರ ಸ್ಥಳ ಮರುನಿಯುಕ್ತಿ ಕೌನ್ಸೆಲಿಂಗ್‌ ಪ್ರಕ್ರಿಯೆ ಜೂನ್‌ 6ರಿಂದ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಾರ್ವತ್ರಿಕ ವರ್ಗಾವಣೆ ಜೂನ್‌ 7ರಿಂದ ಆರಂಭವಾಗಲಿವೆ. ಈ ಕುರಿತು ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಶುಕ್ರವಾರ ಪ್ರಕಟಿಸಿದೆ.  

ಹೆಚ್ಚುವರಿ ಶಿಕ್ಷಕರ ನಿಯುಕ್ತಿ, ಮುಖ್ಯಶಿಕ್ಷಕರು, ಸಹ ಶಿಕ್ಷಕರ ಸಾಮಾನ್ಯ ಕೋರಿಕೆ ವರ್ಗಾವಣೆ, ಜಿಲ್ಲಾ, ವಿಭಾಗೀಯ ಹಂತದ ವರ್ಗಾವಣೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳೂ ಜುಲೈ 31ರ ಒಳಗೆ ಪೂರ್ಣಗೊಳ್ಳಲಿವೆ ಎಂದು ಇಲಾಖೆಯ ಆಯುಕ್ತೆ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020 ಜಾರಿಗೊಳಿಸಿ, ರಾಜ್ಯ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ವರ್ಗಾವಣಾ ವೇಳಾ ಪಟ್ಟಿಯೂ ಬಿಡುಗಡೆಯಾಗಿತ್ತು. ಸುಮಾರು 80 ಸಾವಿರ ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, 10,500 ಹೆಚ್ಚುವರಿ ಶಿಕ್ಷಕರ ಸ್ಥಳ ನಿಯುಕ್ತಿ ಗೊಂದಲ, ವಿಧಾನಸಭಾ ಚುನಾವಣೆಯಿಂದಾಗಿ ವರ್ಗಾವಣಾ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. 

ADVERTISEMENT

ವರ್ಗಾವಣೆ ಪ್ರಕಾರ;ಅವಧಿ

  • ಹೆಚ್ಚುವರಿ ಶಿಕ್ಷಕರ ಮರುಹಂಚಿಕೆ ಕೌನ್ಸೆಲಿಂಗ್;ಜೂನ್‌ 6ರಿಂದ ಜೂನ್‌ 22ರವರೆಗೆ

  • ತಾಂತ್ರಿಕ ಸಹಾಯಕ ಶಿಕ್ಷಕರು/ಅಧಿಕಾರಿಗಳು;ಜೂನ್‌ 8ರಿಂದ ಜೂನ್‌ 26ರವರೆಗೆ

  • ಸಾಮಾನ್ಯ ಕೋರಿಕೆ ವರ್ಗಾವಣೆಗಳು;ಜೂನ್‌ 7ರಿಂದ ಜುಲೈ 31ರವರೆಗೆ

  • ಜಿಲ್ಲಾ ಹಂತದ ವರ್ಗಾವಣೆ ಕೌನ್ಸೆಲಿಂಗ್;ಜುಲೈ 10ರಿಂದ ಜುಲೈ 17ರವರೆಗೆ

  • ವಿಭಾಗೀಯ ಹಂತದ ವರ್ಗಾವಣೆ;ಜುಲೈ 17ರಿಂದ ಜುಲೈ 26ರವರೆಗೆ

  • ಅಂತರ್‌ ವಿಭಾಗೀಯ ವರ್ಗಾವಣೆಗಳು;ಜುಲೈ 25ರಿಂದ ಜುಲೈ 31ರವರೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.