ADVERTISEMENT

ಕೆಪಿಸಿಸಿ ಪುನರ್‌ರಚನೆ: 43 ಉಪಾಧ್ಯಕ್ಷರು, 138 ಪ್ರಧಾನ ಕಾರ್ಯದರ್ಶಿ ನೇಮಕ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 17:44 IST
Last Updated 1 ಏಪ್ರಿಲ್ 2024, 17:44 IST
<div class="paragraphs"><p>ಕೆಪಿಸಿಸಿ ಪುನರ್‌ರಚನೆ</p></div>

ಕೆಪಿಸಿಸಿ ಪುನರ್‌ರಚನೆ

   

ಬೆಂಗಳೂರು: ಲೋಕಸಭೆ ಚುನಾವಣೆಗೆ ಪ್ರಚಾರ ಚುರುಕುಗೊಂಡ ಬೆನ್ನಲ್ಲೆ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯನ್ನು (ಕೆಪಿಸಿಸಿ) ಎಐಸಿಸಿ ಪುನರ್‌ರಚಿಸಿದೆ. ಒಟ್ಟು  43 ಉಪಾಧ್ಯಕ್ಷರು, 138 ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.

ವಿ.ಎಸ್. ಉಗ್ರಪ್ಪ, ಆನಂದ ನ್ಯಾಮೇಗೌಡ, ಎಂ. ನಾರಾಯಣಸ್ವಾಮಿ, ಆರ್‌.ವಿ. ವೆಂಕಟೇಶ್, ಎಂ.ಸಿ. ವೆಂಕಟೇಶ್, ಬಿ.ಎಲ್‌. ಶಂಕರ್‌, ಅಜಯಕುಮಾರ್‌ ಸರನಾಯಕ, ಅಕ್ಕೈ ಪದ್ಮಾಸಾಲಿ, ಎಚ್‌. ಆಂಜನೇಯ, ರಮಾನಾಥ ರೈ, ಮೋಹನ ಲಿಂಬೆಕಾಯಿ ಅವರನ್ನು ಉಪಾಧ್ಯಕ್ಷರಾಗಿ ನೇಮಿಸಲಾಗಿದೆ.

ADVERTISEMENT

ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗದೆ ಮುನಿಸಿಕೊಂಡಿದ್ದ ವೀಣಾ ಕಾಶಪ್ಪನವರ, ಬಿಜೆಪಿ ತ್ಯಜಿಸಿ ‘ಕೈ’ ಹಿಡಿದಿದ್ದ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಪ್ರಧಾನ ಕಾರ್ಯದರ್ಶಿ ಪಟ್ಟಿಯಲ್ಲಿ ವಿಜಯ ಮುಳುಗುಂದ್‌, ವಿ. ಶಂಕರ್, ಎಚ್‌. ನಾಗೇಶ್, ಶಂಕರ್‌ ಗುಹಾ, ನಟಿ ಭಾವನಾ, ಮದನ್‌ ಪಟೇಲ್, ರಕ್ಷಿತ್ ಶಿವರಾಮ್, ಮಿಥುನ್‌ ರೈ, ಸೌಮ್ಯಾ ರೆಡ್ಡಿ, ಬಸವನಗೌಡ ಬಾದರ್ಲಿ ಮುಂತಾದವರ ಹೆಸರು ಇದೆ.

ವಿನಯ್‌ ಕಾರ್ತಿಕ್‌ ಅವರನ್ನು ಖಜಾಂಚಿ, ಮಾಧ್ಯಮ  ವಿಭಾಗಕ್ಕೆ ರಮೇಶ್‌ ಬಾಬು, ಸಹ ಅಧ್ಯಕ್ಷರಾಗಿ ಐಶ್ವರ್ಯಾ ಮಹದೇವ್‌, ಉಪಾಧ್ಯಕ್ಷರಾಗಿ ಇ. ಸತ್ಯಪ್ರಕಾಶ್ ಅವರನ್ನು ನೇಮಿಸಲಾಗಿದೆ. ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ಸಹ ಅಧ್ಯಕ್ಷರಾಗಿ ವಿಜಯ್‌ ಮತ್ತಿಕಟ್ಟಿ, ನಿಕೇತ್‌ ರಾಜ್ ಮೌರ್ಯ ಅವರನ್ನು ನೇಮಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.