ADVERTISEMENT

ರಾಜಕೀಯ ಕಾರಣಕ್ಕೆ ತನಿಖಾ ಸಂಸ್ಥೆಗಳ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ: ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 6:22 IST
Last Updated 27 ಜೂನ್ 2022, 6:22 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್   

ಕೊಪ್ಪಳ: ರಾಜಕೀಯ‌ ಕಾರಣಕ್ಕಾಗಿ ತನಿಖಾ ಸಂಸ್ಥೆಗಳ ಮೂಲಕ ನನ್ನನ್ನು ಟಾರ್ಗೆಟ್ ‌ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದರು.

ಇಲ್ಲಿಗೆ ಸಮೀಪದ ಬಸಾಪುರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರು‌ ಬಲಿಷ್ಠವಾಗಿ ಇರುತ್ತಾರೊ ಅವರನ್ನು ಬಿಜೆಪಿ ಟಾರ್ಗೆಟ್ ‌ಮಾಡುತ್ತದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಚಿದಂಬರಂ ಹಾಗೂ ನನ್ನಂಥವರನ್ನು ಗುರುತಿಸಿ ತನಿಖಾ ಸಂಸ್ಥೆಗಳ ‌ಮೂಲಕ ದಾಳಿ ಮಾಡಿಸಲಾಗುತ್ತಿದೆ. ಕೊಡಬಾರದ ಕಿರುಕುಳ ಕೊಡುತ್ತಾರೆ. ನ್ಯಾಯಾಲಯದ ಬಗ್ಗೆ ನಮಗೆ ನಂಬಿಕೆ ಇದೆ. ನ್ಯಾಯ ಸಿಗಲಿದೆ ಎಂದರು.

ರಾಜಕೀಯ ಉದ್ದೇಶಕ್ಕಾಗಿ ನಡೆಯುತ್ತಿರುವ ದಾಳಿಯನ್ನು ಎದುರಿಸಲೇಬೇಕು. ನಮ್ಮ ಕುಟುಂಬಕ್ಕೆ ಹಾಗೂ ನನ್ನ ಸ್ನೇಹಿತರಿಗೆ ನಿತ್ಯ ನೋಟಿಸ್ ಬರುತ್ತಿವೆ ಎಂದರು.

ADVERTISEMENT

ಅಗ್ನಿಪಥ ವಿಚಾರವಾಗಿ ಪ್ರತಿಕ್ರಿಯಿಸಿ ಈಗಾಗಲೇ ದೇಶ ಹೊತ್ತಿ ಉರಿಯುತ್ತಿದೆ. ಯುವಕರನ್ನು ಬಿಜೆಪಿ ಕಚೇರಿಗೆ ಸೆಕ್ಯುರಿಟಿ ಮಾಡೋಕೆ ಮಾಡುತ್ತಿದ್ದಾರೆ. ಬೇಕಾದರೆ ಮಂತ್ರಿಗಳ ಮಕ್ಕಳನ್ನು ಕಳುಹಿಸಲಿ. ನಮ್ಮ ಮಕ್ಕಳಿಗೆ ಎಂಜಿನಿಯರ್, ಡಾಕ್ಟರ್ಸ್ ಆಗೋದಕ್ಕೆ ಕೊಡಲಿ‌. ಮೊದಲು ಏನಿತ್ತು ಪದ್ಧತಿ ಅದನ್ನು ಮಾಡಿಕೊಂಡು ಹೋಗಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.