ADVERTISEMENT

ಕೆಪಿಎಲ್ ಮ್ಯಾಚ್‌ ಫಿಕ್ಸಿಂಗ್‌: ಬೆಳಗಾವಿ ಫ್ಯಾಂಥರ್ಸ್‌ ತಂಡದ ಮಾಲೀಕನ ಬಂಧನ 

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 5:37 IST
Last Updated 24 ಸೆಪ್ಟೆಂಬರ್ 2019, 5:37 IST
   

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿರುವ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಬೆಳಗಾವಿ ಫ್ಯಾಂಥರ್ಸ್‌ತಂಡದ ಮಾಲೀಕ ಅಲಿ ಅಶ್ಪಾಕ್ ತಾರ್ಅವರನ್ನು ಬಂಧಿಸಿದೆ.

ದುಬೈಯಲ್ಲಿರುವ ಬುಕ್ಕಿಗಳ ಜೊತೆ ಅಲಿ ಬೆಟ್ಟಿಂಗ್‌ನಲ್ಲಿಭಾಗಿಯಾಗಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಅಲಿ ಅಶ್ಪಾಕ್ ತಾರ್

ಕೆಪಿಎಲ್‌ನ ಇತರ ತಂಡಗಳ ಆಟಗಾರರ ಜೊತೆಗೂ ಅಲಿ ಸಂಪರ್ಕ ಹೊಂದಿದ್ದ. ಆ ಆಟಗಾರನ್ನೂ ವಿಚಾರಣೆ ನಡೆಸಲಾಗುವುದು. ಮ್ಯಾಚ್ ಫಿಕ್ಸಿಂಗ್ ಆಗಿದೆಯೇ ಎಂದೂ ತನಿಖೆ ನಡೆಸಲಾಗುವುದು ಎಂದೂ ಮೂಲಗಳು ಹೇಳಿವೆ.

ಇದೇ ಆಗಸ್ಟ್ 16ರಿಂದ 31ರವರೆಗೆ ರಾಜ್ಯದಾದ್ಯಂತ ಕೆಪಿಎಲ್ ಪಂದ್ಯಾವಳಿಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.