ADVERTISEMENT

Video | ಕೆಆರ್‌ಎಸ್‌ ಡ್ಯಾಂ ಜೂನ್‌ನಲ್ಲೇ ಭರ್ತಿ: ರೈತರ ಮೊಗದಲ್ಲಿ ಮಂದಹಾಸ

ಪ್ರಜಾವಾಣಿ ವಿಶೇಷ
Published 25 ಜೂನ್ 2025, 14:13 IST
Last Updated 25 ಜೂನ್ 2025, 14:13 IST

ಸತತ ಮಳೆಯ ಕಾರಣ ಜೀವನದಿ ಕಾವೇರಿ ಕಣಿವೆಯಲ್ಲಿ ಜಲ ಸೊಗಸು ಕಣ್ಮನ ಸೆಳೆಯುತ್ತಿದೆ. ಅದರಲ್ಲಿಯೂ, ಮೈಸೂರು, ಮಂಡ್ಯ ಹಾಗೂ ಬೆಂಗಳೂರು ಜಿಲ್ಲೆಗಳ ಜನ–ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗಿಸುವ ಕೃಷ್ಣರಾಜಸಾಗರ ಜಲಾಶಯ ಅಂದ್ರೆ, ಕೆಆರ್‌ಎಸ್‌ ಡ್ಯಾಂನಲ್ಲಿ ಬುಧವಾರ 121 ಅಡಿಯಷ್ಟು ನೀರು ಭರ್ತಿಯಾಗಿದೆ. ಕೆಆರ್‌ಎಸ್‌ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಈಗ ಡ್ಯಾಂ ತುಂಬಲು 3 ಅಡಿ ಮಾತ್ರ ಬಾಕಿ ಇದೆ. ಜೂನ್‌ನಲ್ಲಿಯೇ ಎರಡನೇ ಬಾರಿ 120ಕ್ಕೂ ಹೆಚ್ಚು ಅಡಿಗಳವರೆಗೆ ನೀರು ಭರ್ತಿಯಾಗಿರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.