ADVERTISEMENT

ಕೆಎಸ್‌ಆರ್‌ಟಿಸಿ: ಹಿರಿಯರಿಗೆ ರಿಯಾಯಿತಿ ಪುನರಾರಂಭ

ಮನವಿಗೆ ಸ್ಪಂದಿಸಿದ ಕೆಎಸ್‌ಆರ್‌ಟಿಸಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 19:31 IST
Last Updated 10 ಡಿಸೆಂಬರ್ 2020, 19:31 IST
ಶಿವಯೋಗಿ ಕಳಸದ
ಶಿವಯೋಗಿ ಕಳಸದ   

ಬಾಗಲಕೋಟೆ: ಸಾರಿಗೆ ಸಂಸ್ಥೆ ಬಸ್‌ಗಳಲ್ಲಿಪ್ರಯಾಣಿಸಲು ಹಿರಿಯ ನಾಗರಿಕರಿಗೆ ನೀಡಿದ್ದ ರಿಯಾಯಿತಿ ದರದ ಪಾಸ್‌ಗಳ ಸೌಲಭ್ಯ ಹಾಗೂ ಟಿಕೆಟ್ ಮೊತ್ತದಲ್ಲಿನ ರಿಯಾಯ್ತಿಯನ್ನು ಡಿಸೆಂಬರ್ 10ರಿಂದ ಪುನರಾರಂಭಿಸಲಾಗಿದೆ.

ಹಿರಿಯ ನಾಗರಿಕರಿಗೆ ಬಸ್ ಪ್ರಯಾಣ ದರದಲ್ಲಿ ಈ ಹಿಂದೆ ನೀಡಿದ್ದ ಶೇ 25ರ ರಿಯಾಯಿತಿಯನ್ನು ಕೊರೊನಾ ಕಾರಣದಿಂದ ಸಾರಿಗೆ ಸಂಸ್ಥೆ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿತ್ತು. ಈಗ ಲಾಕ್‌ಡೌನ್ ಹಂತಹಂತವಾಗಿ ತೆರವಾಗಿದ್ದು, ಬಸ್‌ಗಳಲ್ಲಿ ಜನರ ಪ್ರಯಾಣವೂ ಸಾಮಾನ್ಯ ಸ್ಥಿತಿಗೆ ಬಂದಿದೆ. ಹೀಗಾಗಿ ಮೊದಲು ನೀಡುತ್ತಿದ್ದ ಸವಲತ್ತು ಮತ್ತೆ ಆರಂಭಿಸಲು ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಆಯಾ ಜಿಲ್ಲೆಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಗುರುವಾರ ಸುತ್ತೋಲೆ ಹೊರಡಿಸಿದ್ದಾರೆ.

ಕೂಡಲೇ ಈ ಸವಲತ್ತು ಪುನರ್‌ ಆರಂಭಿಸಬೇಕು. ಈ ಸಂಬಂಧ ಯಾವುದೇ ದೂರುಗಳಿಗೆ ಅವಕಾಶ ನೀಡಿದಂತೆ ಕ್ರಮವಹಿಸಬೇಕು ಎಂದು ಸೂಚಿಸಿದ್ದಾರೆ.

ADVERTISEMENT

ಪ್ರಯಾಣಿಕರಿಂದಲೂ ಬೇಡಿಕೆ: ‘ಆಸ್ಪತ್ರೆಗೆ, ನಿಯಮಿತ ವೈದ್ಯರ ಭೇಟಿಗೆ, ಮಕ್ಕಳು, ಸಂಬಂಧಿಕರ ಮನೆಗೆ ತೆರಳಲು ಬಸ್‌ಗಳಲ್ಲಿ ಪ್ರಯಾಣಿಸುವುದು ಅನಿವಾರ್ಯ. ಸ್ವಂತ ವಾಹನ ಇಲ್ಲದ ಕಾರಣಕ್ಕೆ ಬಸ್‌ಗಳನ್ನೇ ಅವಲಂಬಿಸಬೇಕಿದೆ ಹೀಗಾಗಿ ರಿಯಾಯಿತಿ ಸೌಲಭ್ಯ ಪುನರ್‌ ಆರಂಭಿಸುವಂತೆ ಹಿರಿಯ ನಾಗರಿಕರು ಸಂಸ್ಥೆಗೆ ಮನವಿ ಮಾಡಿದ್ದರು.ಅದಕ್ಕೆ ಸಂಸ್ಥೆ ಮನ್ನಣೆ ನೀಡಿದೆ.

ಫಲಕ ಅಳವಡಿಸಲು ಸೂಚನೆ: 65 ವರ್ಷಕ್ಕಿಂತ ಮೇಲ್ಪಟ್ಟವರ ಆರೋಗ್ಯದ ಹಿತದೃಷ್ಟಿಯಿಂದ ತೀರಾ ಅನಿವಾರ್ಯವಿದ್ದರೆ ಮಾತ್ರ ಬಸ್‌ಗಳಲ್ಲಿ ಪ್ರಯಾಣಿಸುವಂತೆ ಸಲಹೆ ನೀಡುವ ಫಲಕಗಳನ್ನು ಬಸ್ ನಿಲ್ದಾಣಗಳಲ್ಲಿ ಅಳವಡಿಸುವಂತೆಯೂ ಸುತ್ತೋಲೆಯಲ್ಲಿ ಕಳಸದ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.