ADVERTISEMENT

ಲಕ್ಕುಂಡಿಯಲ್ಲಿ ಉತ್ಖನನ: ಹಸಿರು ಕಲ್ಲು ಪತ್ತೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 23:30 IST
Last Updated 23 ಜನವರಿ 2026, 23:30 IST
<div class="paragraphs"><p>ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ  ಉತ್ಖನನ ಕಾರ್ಯ ಭರದಿಂದ ನಡೆಯಿತು</p></div>

ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾರ್ಯ ಭರದಿಂದ ನಡೆಯಿತು

   

ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಶುಕ್ರವಾರ ಮೂಳೆ ತುಂಡುಗಳು, ಹಸಿರು ಬಣ್ಣದ ಚಿಕ್ಕ ಕಲ್ಲು ಹಾಗೂ ಕಬ್ಬಿಣದ ತುಂಡು ಸಿಕ್ಕಿದೆ.

ಇದೇ ಮೊದಲಿಗೆ ಉತ್ಖನನ ದಲ್ಲಿ ಹಸಿರು ಕಲ್ಲು ಪತ್ತೆಯಾಗಿದೆ. ಈ ಕಲ್ಲು ಲಕ್ಕುಂಡಿ ವೈಭವದ ಸಂಕೇತ ಆಗಿರ ಬಹುದು ಎಂದು ಇತಿಹಾಸ ತಜ್ಞರು ಅಂದಾಜಿಸಿದ್ದಾರೆ. ‘ಅಧ್ಯಯನದಿಂದ ಐತಿಹಾಸಿಕ ಹಿನ್ನಲೆ ಗೊತ್ತಾಗಬಹುದು’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.