ADVERTISEMENT

ಜಿಂದಾಲ್‌ಗೆ ಭೂಮಿ, ಮತ್ತೊಂದು ಹಗರಣ: ಅರವಿಂದ ಬೆಲ್ಲದ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 23:30 IST
Last Updated 24 ಆಗಸ್ಟ್ 2024, 23:30 IST
ಅರವಿಂದ್ ಬೆಲ್ಲದ್
ಅರವಿಂದ್ ಬೆಲ್ಲದ್   

ಬೆಂಗಳೂರು: ಜಿಂದಾಲ್ ಕಂಪನಿಗೆ ಕಡಿಮೆ ಬೆಲೆಯಲ್ಲಿ ಜಮೀನು ಕೊಡುವ ಮೂಲಕ ಕಾಂಗ್ರೆಸ್‌ ಸರ್ಕಾರದ ಮತ್ತೊಂದು ಹಗರಣ ಅನಾವರಣಗೊಂಡಿದೆ ಎಂದು ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಕಳೆದು
ಕೊಳ್ಳುವ ಹೊತ್ತಿನಲ್ಲೇ ಮತ್ತೊಂದು ಹಗರಣ ಎಳೆದುಕೊಂಡಿದ್ದಾರೆ. ಜಿಂದಾಲ್‌ ಕಂಪನಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಜಮೀನು ನೀಡಿದ್ದಾರೆ’ ಎಂದರು.

ಕಾಂಗ್ರೆಸ್‌ ಹಿಂದೆ ಅಧಿಕಾರದಲ್ಲಿ ಇದ್ದಾಗ ಪ್ರತಿ ಎಕರೆಗೆ ₹1.20 ಲಕ್ಷದಂತೆ ಭೂಮಿ ನೋಂದಣಿ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಬಿಜೆಪಿ ಶಾಸಕರು ವಿರೋಧಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ವಿರೋಧ ವ್ಯಕ್ತವಾಗಿತ್ತು. ದರ ಹೆಚ್ಚಿಸುವುದಾಗಿ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಕೋರ್ಟ್‌ಗೆ ಹೇಳಿದ್ದರು. ಈಗ ಸಿದ್ದರಾಮಯ್ಯ ಸರ್ಕಾರ ₹1.20 ಲಕ್ಷಕ್ಕೆ ಎಕರೆಯಂತೆ 2 ಸಾವಿರ ಎಕರೆ ಹಾಗೂ ₹1.50 ಲಕ್ಷ ಎಕರೆಯಂತೆ 1,667 ಎಕರೆ ಕೊಡುವ ನಿರ್ಧಾರ ಮಾಡಿದೆ. ಜಿಂದಾಲ್‌ ಜೊತೆಗೆ ಸರ್ಕಾರ ಒಳ ಒಪ್ಪಂದ ಮಾಡಿಕೊಂಡಿದೆ. ಕೋಟ್ಯಂತರ ಬೆಲೆಯ ಜಮೀನನ್ನು ಕೇವಲ ₹ 20 ಕೋಟಿಗೆ ನೀಡಿದೆ. 954 ಎಕರೆ ಕೆಪಿಸಿಎಲ್‌ಗೆ ಸೇರಿದ್ದು, ಕೆಪಿಸಿಎಲ್‌ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.