
ಪ್ರಜಾವಾಣಿ ವಾರ್ತೆ
ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆಗೆ ಬೆಂಗಳೂರಿನ ಪಾಲಿಕೆಗಳು ಸೇರಿದಂತೆ ಸರ್ಕಾರದ ಇತರ ಆಸ್ಪತ್ರೆಗಳಲ್ಲಿನ ಸೇವಾ ನಿರತ ಅಭ್ಯರ್ಥಿಗಳಿಗೆ ಡಿಎನ್‌ಬಿ ಸೀಟುಗಳು ಲಭ್ಯವಿದ್ದು, ಆಯ್ಕೆ ದಾಖಲಿಸಲು ಫೆ.18ರಂದು ಮಧ್ಯಾಹ್ನ 12ರವರೆಗೆ ಅವಕಾಶ ನೀಡಲಾಗಿದೆ.
ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಕೋರ್ಸ್‌ಗಳ ಪಟ್ಟಿಗಳಿಗೆ ಮಾತ್ರ ಸೇವಾ ನಿರತರು ಆಯ್ಕೆಗಳನ್ನು ದಾಖಲಿಸಬಹುದು. ಸೇವಾ ನಿರತರಲ್ಲದೆ ಇತರ ಅಭ್ಯರ್ಥಿಗಳು ಕೂಡ ತಮ್ಮ ಆಯ್ಕೆಗಳನ್ನು ದಾಖಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.