ADVERTISEMENT

ಬಸವಕಲ್ಯಾಣ | ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದ ಪಥ ಸಂಚಲನ ಆರಂಭ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 5:54 IST
Last Updated 4 ಮಾರ್ಚ್ 2023, 5:54 IST
   

ಬಸವಕಲ್ಯಾಣ: ಜಾಗತಿಕ‌ ಲಿಂಗಾಯತ ಮಹಾಸಭಾ ವತಿಯಿಂದ ಇಲ್ಲಿ ಎರಡು‌ ದಿನ ನಡೆಯುವ ಲಿಂಗಾಯತ ಮಹಾ ಅಧಿವೇಶನ ಪೂರ್ವದಲ್ಲಿ ಶನಿವಾರ ಬೆಳಿಗ್ಗೆ ಬಸವಣ್ಣನವರ ಪರುಷಕಟ್ಟೆಯಿಂದ ಪಥ ಸಂಚಲನ ಆರಂಭಗೊಂಡಿತು. ಸಾವಿರಾರು ಜನರು ಪಾಲ್ಗೊಂಡರು.

ಅಧಿವೇಶನದ ಸರ್ವಾಧ್ಯಕ್ಷ ಗೋ.ರು.ಚನ್ನಬಸಪ್ಪ ಪೂಜೆ ಸಲ್ಲಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ, ಬಸವ‌ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಬೈಲೂರು ನಿಜಗುಣಾನಂದ‌ ಸ್ವಾಮೀಜಿ, ಭಾಲ್ಕಿ‌ ಬಸವಲಿಂಗ ಪಟ್ಟದ್ದೇವರು, ಬಸವರಾಜ ಧನ್ನೂರ, ಕೂಡಲಸಂಗಮ ಮಾತೆ ಗಂಗಾದೇವಿ, ಬೇಲಿ‌ಮಠದ ಶಿವರುದ್ರ ಸ್ವಾಮೀಜಿ, ಅಕ್ಕ ಅನ್ನಪೂರ್ಣ, ಅಕ್ಕ ಗಂಗಾಂಬಿಕಾ, ಡಾ.ಬಸವರಾಜ ಪಂಡಿತ್, ಭಾಲ್ಕಿ ಗುರು ಬಸವ ಪಟ್ಟದ್ದೆವರು, ಬಸವರಾಜ ಕೋರಕೆ ಮತ್ತಿತರರು ಪಾಲ್ಗೊಂಡಿದ್ದರು.

ಅಲಂಕೃತ ರಥದಲ್ಲಿ ಬಸವಣ್ಣನವರ ಮೂರ್ತಿ ಇಡಲಾಗಿತ್ತು. ಸಾರೋಟದಲ್ಲಿ ಗೋ.ರು.ಚನ್ನಬಸವಣ್ಣ ಕುಳಿತಿದ್ದರು. ಎಲ್ಲರೂ ಶ್ವೇತ ವಸ್ತ್ರ ತೊಟ್ಟು ಕೈಯಲ್ಲಿ ಷಟಸ್ಥಲ ಧ್ವಜ‌ ಹಿಡಿದಿದ್ದರು. ವಾದ್ಯ ಮೇಳದವರಿದ್ದರು. ಯುವಕರು ವಚನಗಳ ಹಾಡಿಗೆ ಕುಣಿದರು. ಕೋಟೆ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ರಥ ಮೈದಾನದವರೆಗೆ ಪಥ ಸಂಚಲನ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.