
ಸುಭಾಷ್ ನಾಟೀಕರ್, ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಸೂಪರ್‌ಇಂಟೆಂಡೆಂಟ್ ಕೃಷ್ಣಮೂರ್ತಿ ಪಿ. ಅವರ ಮನೆಯಲ್ಲಿ ಪತ್ತೆಯಾದ ನಗದು,
ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೇರಿದ 47 ಸ್ಥಳಗಳಲ್ಲಿ ಶೋಧ ನಡೆಸಿದ್ದ ಲೋಕಾಯುಕ್ತ ಪೊಲೀಸರು ₹35.31 ಕೋಟಿ ಮೌಲ್ಯದ ಸ್ವತ್ತು ಪತ್ತೆಮಾಡಿದ್ದಾರೆ. ಬಹುತೇಕ ಅಧಿಕಾರಿಗಳು ನಿವೇಶನ, ಮನೆ ಮತ್ತು ಕೃಷಿ ಜಮೀನುಗಳ ಮೇಲೆ ಹೂಡಿಕೆ ಮಾಡಿದ್ದಾರೆ.
ರಾಜ್ಯದ ವಿವಿಧ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ದೂರುಗಳ ಅಧಾರದಲ್ಲಿ ಮಂಗಳವಾರ ಬೆಳಿಗ್ಗೆಯೇ, 10 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.
ಎಲ್ಲ ಹತ್ತು ಅಧಿಕಾರಿಗಳ ಬಳಿ ಒಟ್ಟು 50 ನಿವೇಶನ, 23 ಮನೆ–ಬಂಗಲೆ, 78 ಎಕರೆ 21 ಗುಂಟೆಗಳಷ್ಟು ಕೃಷಿ ಜಮೀನು ಪತ್ತೆಯಾಗಿದೆ. ಈ ಎಲ್ಲವುಗಳ ಮೌಲ್ಯ ₹22.31 ಕೋಟಿಯಷ್ಟಾಗುತ್ತದೆ. ಈ ಅಧಿಕಾರಿಗಳು ತಮ್ಮ ಕುಟುಂಬದವರು, ಸಂಬಂಧಿಕರು ಮತ್ತು ಆಪ್ತರ ಹೆಸರಿನಲ್ಲಿ ಕೃಷಿ ಜಮೀನು, ನಿವೇಶನ ಮತ್ತು ವಾಹನಗಳನ್ನು ಹೊಂದಿರುವುದು ಗೊತ್ತಾಗಿದೆ.
ಈ ಅಧಿಕಾರಿಗಳು ಸ್ಥಿರಾಸ್ತಿಯ ನಂತರ, ಚಿನ್ನಾಭರಣಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಿದ್ದಾರೆ. ದಾಳಿಯ ವೇಳೆ ಒಟ್ಟು ₹5.91 ಕೋಟಿ ಮೌಲ್ಯದಷ್ಟು ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಪತ್ತೆಯಾಗಿವೆ.
ಕಾರ್ಯಪಾಲಕ ಎಂಜಿನಿಯರ್ ಬಳಿ ಗರಿಷ್ಠ ಆಸ್ತಿ: ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಘಟಕದ ಕಾರ್ಯಪಾಲಕ ಎಂಜಿನಿಯರ್ ಶೇಖಪ್ಪ ಸಣ್ಣಪ್ಪ ಮಟ್ಟಿಕಟ್ಟಿ ಅವರಿಗೆ ಸೇರಿದ ₹5.36 ಕೋಟಿ ಮೌಲ್ಯದ ಆಸ್ತಿ ಇದ್ದು, ಮಂಗಳವಾರದ ದಾಳಿಯ ವೇಳೆ ಪತ್ತೆಯಾದ ಗರಿಷ್ಠ ಮೊತ್ತ ಇದಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಸೂಪರಿಂಟೆಂಡೆಂಟ್ ಕೃಷ್ಣಮೂರ್ತಿ ಪಿ. ಅವರ ಬಳಿ ₹4.26 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಭಾಷ್‌ಚಂದ್ರ ಚಂದ್ರವ್ವ ನಾಟೀಕರ್ ಅವರಿಗೆ ಸೇರಿದ 6 ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅವರು ಒಟ್ಟು ₹3.11 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಹಲವರ ಬ್ಯಾಂಕ್ ಲಾಕರ್‌ಗಳನ್ನು ಇನ್ನಷ್ಟೇ ತೆರೆಯಬೇಕಿದ್ದು, ಆಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗ ಪತ್ತೆಯಾಗಿರುವ ಸ್ವತ್ತುಗಳಿಗೆ ಸಂಬಂಧಿಸಿದಂತೆ ವಿವರಣೆ ಕೇಳಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಯಾವುದರ ಮೇಲೆ ಎಷ್ಟು ಹೂಡಿಕೆ...
₹22.31 ಕೋಟಿಸ್ಥಿರಾಸ್ತಿಗಳು ₹78.40 ಲಕ್ಷನಗದು ₹5.91 ಕೋಟಿಚಿನ್ನಾಭರಣ ₹2.33 ಕೋಟಿವಾಹನಗಳು ₹3.96 ಕೋಟಿಗೃಹೋಪಯೋಗಿ ವಸ್ತುಗಳು ಷೇರು ಮ್ಯೂಚುವಲ್ ಫಂಡ್
ಅಧಿಕಾರಿಗಳ ಆಸ್ತಿ ವಿವರಕೃ
ಷ್ಣಮೂರ್ತಿ ಪಿ. ಕಚೇರಿ ಸೂಪರಿಂಟೆಂಡೆಂಟ್ ಆರ್‌ಟಿಒ ಎಲೆಕ್ಟ್ರಾನಿಕ್ಸ್ ಸಿಟಿ ಬೆಂಗಳೂರು ₹3.34 ಕೋಟಿ ಮೌಲ್ಯದ 7 ನಿವೇಶನ 4 ಮನೆ 5 ಎಕರೆ 30 ಗುಂಟೆ ಕೃಷಿ ಜಮೀನು ₹22 ಲಕ್ಷ ನಗದು ₹32 ಲಕ್ಷದ ಚಿನ್ನಾಭರಣ ₹22 ಲಕ್ಷದ ವಾಹನ ₹16 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.26 ಕೋಟಿಆಸ್ತಿಯ ಒಟ್ಟು ಮೌಲ್ಯ ––––––
ರಾಮಸ್ವಾಮಿ ಸಿ.ರೆವೆನ್ಯೂ ಇನ್‌ಸ್ಪೆಕ್ಟರ್ ಹೂಟಗಳ್ಳಿ ನಗರಸಭೆ ಮೈಸೂರು ₹1.65 ಕೋಟಿ ಮೌಲ್ಯದ 3 ನಿವೇಶನ 2 ಮನೆ 7 ಎಕರೆ ಕೃಷಿ ಜಮೀನು ₹1.15 ಲಕ್ಷ ನಗದು ₹86.26 ಲಕ್ಷದ ಚಿನ್ನಾಭರಣ ₹14.80 ಲಕ್ಷದ ವಾಹನ ₹10 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.77 ಕೋಟಿಆಸ್ತಿಯ ಒಟ್ಟು ಮೌಲ್ಯ ––––
ಪ್ರಭು.ಜೆಸಹಾಯಕ ನಿರ್ದೇಶಕ ಎಪಿಎಂಸಿ ದಾವಣಗೆರೆ ₹1.04 ಕೋಟಿ ಮೌಲ್ಯದ 5 ನಿವೇಶನ 3 ಮನೆ 3 ಎಕರೆ ಕೃಷಿ ಜಮೀನು ₹7.20 ಲಕ್ಷ ನಗದು ₹85.60 ಲಕ್ಷದ ಚಿನ್ನಾಭರಣ ₹12 ಲಕ್ಷದ ವಾಹನ ₹40.50 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.49 ಕೋಟಿಆಸ್ತಿಯ ಒಟ್ಟು ಮೌಲ್ಯ
–––– ಸಿ.ಪುಟ್ಟಸ್ವಾಮಿಸಮುದಾಯ ಸಂಘಟನಾಧಿಕಾರಿ ನಗರಸಭೆ ಕಾರ್ಯಾಲಯ ಮಂಡ್ಯ ಟೌನ್ ಮಂಡ್ಯ ₹3.48 ಕೋಟಿ ಮೌಲ್ಯದ 8 ನಿವೇಶನ 2 ಮನೆ 12 ಎಕರೆ ಕೃಷಿ ಜಮೀನು ₹1.75 ಲಕ್ಷ ನಗದು ₹25 ಲಕ್ಷದ ಚಿನ್ನಾಭರಣ ₹33 ಲಕ್ಷದ ವಾಹನ ₹29.25 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.37 ಕೋಟಿಆಸ್ತಿಯ ಒಟ್ಟು ಮೌಲ್ಯ
–––– ಪ್ರೇಮ್ ಸಿಂಗ್‌ಮುಖ್ಯ ಎಂಜಿನಿಯರ್ ಕೃಷ್ಣ ಭಾಗ್ಯ ಜಲ ನಿಗಮ ಕಾಲುವೆ ವಿಭಾಗ–1 ಶಹಾಪುರ ಯಾದಗಿರಿ ₹2.43 ಕೋಟಿ ಮೌಲ್ಯದ 4 ನಿವೇಶನ 1 ಮನೆ 24 ಎಕರೆ 30 ಗುಂಟೆ ಕೃಷಿ ಜಮೀನು ₹60 ಲಕ್ಷ ಠೇವಣಿ ₹50.75 ಲಕ್ಷದ ಚಿನ್ನಾಭರಣ ₹42.48 ಲಕ್ಷದ ವಾಹನ ₹8.83 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.07 ಕೋಟಿಆಸ್ತಿಯ ಒಟ್ಟು ಮೌಲ್ಯ
–––– ಶೇಖಪ್ಪ ಸಣ್ಣಪ್ಪ ಮಟ್ಟಿಕಟ್ಟಿಕಾರ್ಯಪಾಲಕ ಎಂಜಿನಿಯರ್ ಜಿಲ್ಲಾ ನಗರಾಭಿವೃದ್ಧಿ ಘಟಕ ಹಾವೇರಿ ₹3.67 ಕೋಟಿ ಮೌಲ್ಯದ 14 ನಿವೇಶನ 3 ಮನೆ ₹10.44 ಲಕ್ಷ ನಗದು ₹25.40 ಲಕ್ಷದ ಚಿನ್ನಾಭರಣ ₹15 ಲಕ್ಷದ ವಾಹನ ₹1.18 ಕೋಟಿ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹5.36 ಕೋಟಿಆಸ್ತಿಯ ಒಟ್ಟು ಮೌಲ್ಯ
–––– ಸುಭಾಷ್‌ಚಂದ್ರ ಚಂದ್ರವ್ವ ನಾಟೀಕರ್ ಸಹಾಯಕ ಪ್ರಾಧ್ಯಾಪಕ ಸಮಾಜಶಾಸ್ತ್ರ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ₹2.59 ಕೋಟಿ ಮೌಲ್ಯದ 5 ನಿವೇಶನ 2 ಮನೆ 18 ಎಕರೆ 21 ಗುಂಟೆ ಕೃಷಿ ಜಮೀನು ₹1.12 ಲಕ್ಷ ನಗದು ₹6.75 ಲಕ್ಷದ ಚಿನ್ನಾಭರಣ ₹37 ಲಕ್ಷದ ವಾಹನ ₹8 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹3.11 ಕೋಟಿಆಸ್ತಿಯ ಒಟ್ಟು ಮೌಲ್ಯ
–––– ಸತೀಶ್ ರಾಮಣ್ಣ ಕಟ್ಟಿಮನಿಹಿರಿಯ ಪಶು ಪರಿವೀಕ್ಷಕ ಪ್ರಾಥಮಿಕ ಪಶು ಆಸ್ಪತ್ರೆ ಹುಲಿಗೋಳ್ ಗದಗ ₹55.50 ಲಕ್ಷ ಮೌಲ್ಯದ 2 ಮನೆ 4 ಎಕರೆ ಕೃಷಿ ಜಮೀನು ₹17.16 ಲಕ್ಷ ನಗದು ₹74.80 ಲಕ್ಷದ ಚಿನ್ನಾಭರಣ ₹25 ಲಕ್ಷದ ವಾಹನ ₹36.60 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.09 ಕೋಟಿಆಸ್ತಿಯ ಒಟ್ಟು ಮೌಲ್ಯ
–––– ಡಿ.ಎಂ.ಗಿರೀಶ್‌ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಮಡಿಕೇರಿ ವಿಭಾಗ ಕೊಡಗು ₹1.89 ಕೋಟಿ ಮೌಲ್ಯದ 4 ನಿವೇಶನ 1 ಮನೆ ₹5.53 ಲಕ್ಷ ನಗದು ₹1.81 ಕೋಟಿ ಮೌಲ್ಯದ ಚಿನ್ನಾಭರಣ ₹9.08 ಲಕ್ಷದ ವಾಹನ ₹40 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹4.26 ಕೋಟಿಆಸ್ತಿಯ ಒಟ್ಟು ಮೌಲ್ಯ
–––– ಸಿ.ಎನ್.ಲಕ್ಷ್ಮೀಪತಿಪ್ರಥಮ ದರ್ಜೆ ಸಹಾಯಕ ಸಿಮ್ಸ್ ವೈದ್ಯಕೀಯ ಕಾಲೇಜು ಶಿವಮೊಗ್ಗ ₹1.63 ಕೋಟಿ ಮೌಲ್ಯದ 3 ಮನೆ 3 ಎಕರೆ 20 ಗುಂಟೆ ಕೃಷಿ ಜಮೀನು ₹12.01 ಲಕ್ಷ ನಗದು ₹23.29 ಲಕ್ಷದ ಚಿನ್ನಾಭರಣ ₹23.04 ಲಕ್ಷದ ವಾಹನ ₹27.47 ಲಕ್ಷ ಮೌಲ್ಯದ ಹೂಡಿಕೆ ಮತ್ತು ಗೃಹೋಪಯೋಗಿ ವಸ್ತುಗಳು ₹2.49 ಕೋಟಿಆಸ್ತಿಯ ಒಟ್ಟು ಮೌಲ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.